×
Ad

ಚೀನಾದ ಆಸ್ಪತ್ರೆಯಲ್ಲಿ ಚೂರಿ ದಾಳಿ | ಕನಿಷ್ಠ ಇಬ್ಬರ ಸಾವು; 21 ಮಂದಿಗೆ ಗಾಯ

Update: 2024-05-07 22:38 IST

ಸಾಂದರ್ಭಿಕ ಚಿತ್ರ



ಬೀಜಿಂಗ್: ನೈಋತ್ಯ ಚೀನಾದಲ್ಲಿರುವ ಆಸ್ಪತ್ರೆಯೊಂದರಲ್ಲಿ ಮಂಗಳವಾರ ನಡೆದ ಚೂರಿ ದಾಳಿಯಲ್ಲಿ ಕನಿಷ್ಠ ಇಬ್ಬರು ಮೃತಪಟ್ಟಿದ್ದು ಇತರ 21 ಮಂದಿ ಗಾಯಗೊಂಡಿರುವುದಾಗಿ ವರದಿಯಾಗಿದೆ.

ಆಸ್ಪತ್ರೆಯ ಆವರಣ ಪ್ರವೇಶಿಸಿದ ವ್ಯಕ್ತಿಯೊಬ್ಬ ಎರಡೂ ಕೈಗಳಲ್ಲಿ ಚೂರಿಯನ್ನು ಝಳಪಿಸುತ್ತಾ ಮನಬಂದಂತೆ ದಾಳಿ ನಡೆಸುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಯುನಾನ್ ಪ್ರಾಂತದ ಝೆನ್‍ಕ್ಸಿಯಾಂಗ್ ಪೀಪಲ್ಸ್ ಹಾಸ್ಪಿಟಲ್‍ನಲ್ಲಿ ಮಂಗಳವಾರ ಬೆಳಿಗ್ಗೆ ಘಟನೆ ನಡೆದಿದ್ದು ಶಂಕಿತ ಆರೋಪಿಯನ್ನು ಝೆನ್‍ಕ್ಸಿಯಾಂಗ್ ಪ್ರಾಂತದ ಪೋಜಿ ನಗರದ ನಿವಾಸಿಯೆಂದು ಪೊಲೀಸರು ಗುರುತಿಸಿದ್ದಾರೆ. ಚೂರಿ ದಾಳಿ ನಡೆಸಿದ ಆರೋಪಿ ಪರಾರಿಯಾಗಿದ್ದಾನೆ ಎಂದು `ಹಾಂಗ್‍ಕ್ಸಿಂಗ್ ನ್ಯೂಸ್' ವರದಿ ಮಾಡಿದೆ. ಮನೆಯ ಬಾಗಿಲನ್ನು ಮುಚ್ಚಿರುವಂತೆ ಹಾಗೂ ಅಪರಿಚಿತ ವ್ಯಕ್ತಿಗಳು ಕಂಡುಬಂದರೆ ತಕ್ಷಣ ಮಾಹಿತಿ ನೀಡುವಂತೆ ಪೊಲೀಸರು ಸ್ಥಳೀಯರಿಗೆ ಸೂಚಿಸಿರುವುದಾಗಿ ವರದಿ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News