ಯುಎಸ್ ಓಪನ್: ನವೋಮಿ ಒಸಾಕಾ ಸೆಮಿಫೈನಲ್‌ಗೆ

Update: 2020-09-09 18:09 GMT

ನ್ಯೂಯಾರ್ಕ್, ಸೆ.9: ನವೋಮಿ ಒಸಾಕಾ ಯುಎಸ್ ಓಪನ್ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್ ಫೈನಲ್‌ನಲ್ಲಿ ಅಮೆರಿಕದ ಶೆಲ್ಬಿ ರೋಜರ್ಸ್ ವಿರುದ್ಧ 6-3, 6-4 ನೇರ ಸೆಟ್‌ಗಳಿಂದ ಜಯ ಗಳಿಸುವ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ.

 ರೋಜರ್ಸ್ ವಿರುದ್ಧ 0-3 ಹೆಡ್- ಟು-ಹೆಡ್ ದಾಖಲೆ ಹೊಂದಿದ್ದ ಒಸಾಕಾ, ಸುಲಭವಾಗಿ ಜಯ ಸಾಧಿಸಿದರು.

  ಜನಾಂಗೀಯ ಅನ್ಯಾಯದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಯ ಭಾಗವಾಗಿ ಜಾರ್ಜ್ ಫ್ಲಾಯ್ಡಾ ಹೆಸರಿನ ಕಪ್ಪು ಮಾಸ್ಕ್ ಧರಿಸಿ ಒಸಾಕಾ ಕೋರ್ಟ್ ಪ್ರವೇಶಿಸಿದ್ದರು. ಫ್ಲಾಯ್ಡಾ ಎಂಬ ಕರಿಯ ವ್ಯಕ್ತಿ ಮೇ ತಿಂಗಳಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ್ದರು.

ಕ್ಯಾರೆನೊ ಬುಸ್ಟಾಗೆ ಜಯ

 ಪ್ಯಾಬ್ಲೊ ಕ್ಯಾರೆನೊ ಬುಸ್ಟಾ ಮಂಗಳವಾರ ನಡೆದ ಯುಎಸ್ ಓಪನ್ ರ್ಕ್ವಾಟರ್ ಫೈನಲ್‌ನಲ್ಲಿ ಡೆನಿಸ್ ಶಪೋವೊಲೊವ್ ವಿರುದ್ಧ 3-6, 7-6 (5), 7-6 (4), 0-6, 6-3 ಸೆಟ್‌ಗಳಿಂದ ಜಯ ಗಳಿಸಿ ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಿದರು.

ಝ್ವೆರೆವ್ ಸೆಮೀಸ್‌ಗೆ

ಜರ್ಮನಿಯ ಐದನೇ ಶ್ರೇಯಾಂಕದ ಅಲೆಕ್ಸಾಂಡರ್ ಝ್ವೆರೆವ್ ಈ ವರ್ಷ ಎರಡನೇ ಬಾರಿ ಗ್ರಾನ್ ಸ್ಲಾಮ್ ಸೆಮಿಫೈನಲ್ ತಲುಪಿದ್ದಾರೆ.

ಕ್ರೊಯೇಷಿಯಾದ ಬೊರ್ನಾ ಕೊರಿಕ್ ವಿರುದ್ಧ 1-6,7-6 (5), 7-6 (1), 6-3 ಅಂತರದಿಂದ ಜಯಗಳಿಸಿ ಸೆಮಿಫೈನಲ್ ತೆರ್ಗಡೆಯಾದರು.

  ನಿಧಾನಗತಿಯ ಆರಂಭದ ನಂತರ, ಝ್ವೆರೆವ್ ತಮ್ಮ ಆಟವನ್ನು ಹೆಚ್ಚಿ ಸಿದರು. ಝ್ವೆರೆವ್ 1995 ರಲ್ಲಿ ಬೋರಿಸ್ ಬೆಕರ್ ನಂತರ ಯು.ಎಸ್. ಓಪನ್‌ನಲ್ಲಿ ಕೊನೆಯ ನಾಲ್ಕನೇ ಸ್ಥಾನವನ್ನು ತಲುಪಿದ ಮೊದಲ ಜರ್ಮನ್ ಆಟಗಾರ ಎನಿಸಿಕೊಂಡಿದ್ದಾರೆ.

 ಕೋರಿಕ್ ತನ್ನ ವೃತ್ತಿಜೀವನದ ಮೊದಲ ಗ್ರ್ಯಾನ್ ಸ್ಲಾಮ್ ಕ್ವಾರ್ಟರ್ ಫೈನಲ್ ಪಂದ್ಯ ತಲುಪಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News