ಭಾರತೀಯ ವಾಯುಪಡೆಗೆ ಐದು ರಫೇಲ್ ಯುದ್ದ ವಿಮಾನಗಳ ಸೇರ್ಪಡೆ

Update: 2020-09-10 06:41 GMT

ಹೊಸದಿಲ್ಲಿ, ಸೆ.10: ಬಹು ಸಾಮರ್ಥ್ಯದ ಐದು ರಫೇಲ್ ಯುದ್ದ ವಿಮಾನಗಳು ಇಂದು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಭಾರತೀಯ ವಾಯುಪಡೆಗೆ ವಿಧ್ಯುಕ್ತವಾಗಿ ಸೇರ್ಪಡೆಯಾಗಿವೆ.

ಪೂರ್ವ ಲಡಾಖ್‌ನಲ್ಲಿ ಚೀನಾದ ಜೊತೆ ಗಡಿ ವಿವಾದ ಉದ್ವಿಗ್ನ ಸ್ಥಿತಿ ತಲುಪಿರುವ ನಡುವೆಯೇ ಭಾರತಕ್ಕೆ ರಫೇಲ್ ಸೇರ್ಪಡೆಯಾಗುತ್ತಿರುವುದು ಹೆಚ್ಚಿನ ಮಹತ್ವ ಪಡೆದಿದೆ.

ರಕ್ಷಣಾ ಸಚಿವ ರಾಜನಾಥ್ ಸಿಂಗ್, ಫ್ರಾನ್ಸ್ ರಕ್ಷಣಾ ಸಚಿವ ಫ್ಲೋರೆನ್ಸ್ ಪಾರ್ಲಿ, ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್, ಏರ್ ಚೀಫ್ ಮಾರ್ಷಲ್ ಆರ್.ಕೆ.ಎಸ್. ಬದೌರಿಯ ಹಾಗೂ ರಕ್ಷಣಾ ಕಾರ್ಯದರ್ಶಿ ಅಜಯ ಕುಮಾರ್ ಸಮಾರಂಭದಲ್ಲಿ ಭಾಗವಹಿಸಿದ್ದರು.

  ರಫೇಲ್ ಯುದ್ದ ವಿಮಾನಗಳ ಔಪಚಾರಿಕ ಸೇರ್ಪಡೆಗೆ ಮೊದಲು ಸಾಂಪ್ರದಾಯಿಕ ಸರ್ವಧರ್ಮ ಪೂಜೆ ನೆರವೇರಿಸಲಾಯಿತು. ನೀರಿನ ಫಿರಂಗಿ ಸೆಲ್ಯೂಟ್ ಕೂಡ ಮಾಡಲಾಯಿತು.

"ಇತ್ತೀಚೆಗಿನ ದಿನಗಳಲ್ಲಿ ನಮ್ಮ ಗಡಿಗಳಲ್ಲಿನ ಪರಿಸ್ಥಿತಿಯ ಹಿನ್ನೆಲೆಯಲ್ಲಿ ಐದು ರಫೇಲ್ ಯುದ್ಧ ವಿಮಾನಗಳ ಸೇರ್ಪಡೆ ಅತ್ಯಂತ ಮುಖ್ಯವಾಗಿದೆ. ಭಾರತೀಯ ವಾಯುಪಡೆಗೆ ರಫೇಲ್ ಯುದ್ದ ವಿಮಾನಗಳ ಸೇರ್ಪಡೆಯು ಭಾರತ ಹಾಗೂ ಫ್ರಾನ್ಸ್ ದೇಶಗಳು ಉತ್ತಮ ಸಂಬಂಧವನ್ನು ಪ್ರತಿನಿಧಿಸುತ್ತದೆ'' ಎಂದು ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News