ಯುಎಇ: ಸೆಪ್ಟಂಬರ್ 11ರಿಂದ ಅವಧಿ ಮೀರಿದ ವಾಸ್ತವ್ಯಕ್ಕಾಗಿ ಪ್ರವಾಸಿಗರಿಗೆ ದಂಡ

Update: 2020-09-12 17:08 GMT

ದುಬೈ, ಸೆ. 12: ಮಾರ್ಚ್ 1ರ ಬಳಿಕ ಸಂದರ್ಶನ ವೀಸಾ ಅವಧಿ ಮುಕ್ತಾಯಗೊಂಡಿರುವ ಪ್ರವಾಸಿಗರು, ಯುಎಇಯಲ್ಲಿ ಅವಧಿ ಮೀರಿ ವಾಸಿಸಿರುವುದಕ್ಕಾಗಿ ಸೆಪ್ಟಂಬರ್ 11ರ ಬಳಿಕ ದಂಡ ಪಾವತಿಸಬೇಕಾಗುತ್ತದೆ ಎಂದು ಅಮೀರ್ ಕಾಲ್ ಸೆಂಟರ್ ಏಜಂಟೊಬ್ಬರು ಹೇಳಿದ್ದಾರೆ.

ಅವಧಿ ಮೀರಿದ ವಾಸ್ತವ್ಯಕ್ಕಾಗಿ ಮೊದಲ ದಿನಕ್ಕೆ 200 ದಿರ್ಹಮ್ (ಸುಮಾರು 4,000 ರೂಪಾಯಿ) ದಂಡ ವಿಧಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ. ‘‘ನಿಖರ ದಂಡ ಮೊತ್ತವನ್ನು ವಿಮಾನ ನಿಲ್ದಾಣಗಳಲ್ಲಿರುವ ವಲಸೆ ಅಧಿಕಾರಿಗಳು ಲೆಕ್ಕಹಾಕುತ್ತಾರೆ. ಅವಧಿ ಮೀರಿದ ವಾಸ್ತವ್ಯಕ್ಕೆ ಮೊದಲ ದಿನಕ್ಕೆ 200 ದಿರ್ಹಮ್ ಹಾಗೂ ಬಳಿಕದ ಪ್ರತಿ ದಿನಕ್ಕೆ ತಲಾ 100 ದಿರ್ಹಮ್ (ಸುಮಾರು 2,000 ರೂಪಾಯಿ) ಮತ್ತು 100 ದಿರ್ಹಮ್ ಸೇವಾ ಶುಲ್ಕ ವಿಧಿಸಲಾಗುತ್ತದೆ’’ ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News