ಐಎಸ್‌ಎಲ್ : ಈಸ್ಟ್ ಬೆಂಗಾಲ್ ಮುಖ್ಯ ಕೋಚ್ ಹುದ್ದೆಗೆ ರಿವೆರಾ ಸಿದ್ಧ

Update: 2020-09-14 04:13 GMT

ಕೋಲ್ಕತಾ , ಸೆ.13: ಐ ಲೀಗ್‌ನ 2019-20ರ ಋತುವಿನಲ್ಲಿ ಎರಡನೇ ಸ್ಥಾನ ಪಡೆದಿದ್ದ ಈಸ್ಟ್ ಬೆಂಗಾಲ್ ತಂಡದ ಮುಖ್ಯ ಕೋಚ್ ಆಗಿ ಮರಳಲು ಮಾರಿಯೋ ರಿವೆರಾ ಸಿದ್ಧರಾಗಿದ್ದಾರೆ.

ಶ್ರೀಸಿಮೆಂಟ್ ಒಡೆತನಕ್ಕೆ ಒಳಪಟ್ಟ ಬಳಿಕ ಈಸ್ಟ್ ಬೆಂಗಾಲ್ ಇನ್ನೂ ಮುಖ್ಯ ಕೋಚ್‌ನ್ನು ಅಂತಿಮಗೊಳಿಸಲಿಲ್ಲ. ಸರ್ಬಿಯಾದ ಮಾಜಿ ಅಂತರ್‌ರಾಷ್ಟ್ರೀಯ ಆಟಗಾರ ರಿಸ್ಟೊ ವಿಡಕೋವಿಕ್ ಕೋಚ್ ಹುದ್ದೆಯ ರೇಸ್‌ನಲ್ಲಿದ್ದಾರೆ.

ಈಸ್ಟ್ ಬೆಂಗಾಲ್‌ನ ಅಭಿಮಾನಿಗಳಿಂದ ಪ್ರತಿದಿನ ಅನೇಕ ಸಂದೇಶಗಳನ್ನು ಸ್ವೀಕರಿಸುತ್ತಿದ್ದೇನೆ, ಆದರೆ ಈ ಕ್ಷಣದಲ್ಲಿ ಏನೂ ಹೇಳಲಾರೆ ಎಂದು ರಿವೇರಾ ತಿಳಿಸಿದ್ದಾರೆ. 2018ರಿಂದ 2019ರ ತನಕ 32 ಪಂದ್ಯಗಳಿಗೆ ಅಲೆಜಾಂಡ್ರೊ ಮೆನೆಂಡೆಝ್ ಅವರ ಉಪನಾಯಕನಾಗಿ ಕೆಲಸ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News