ಅಭೂತಪೂರ್ವ ಮುನ್ನೆಚ್ಚರಿಕೆಯೊಂದಿಗೆ ಮುಂಗಾರು ಅಧಿವೇಶನ ಆರಂಭ

Update: 2020-09-14 06:58 GMT

ಹೊಸದಿಲ್ಲಿ, ಸೆ.14: ಉಭಯ ಸದನಗಳಲ್ಲಿ ಸಂಸದರ ಆಸನದ ನಡುವೆ ಸುರಕ್ಷಿತ ಅಂತರವನ್ನು ಕಾಯ್ದುಕೊಂಡಿರುವುದು ಸೇರಿದಂತೆ ಕೊರೋನ ವೈರಸ್ ವಿರುದ್ಧ ಅಭೂತಪೂರ್ವ ಮುನ್ನೆಚ್ಚರಿಕೆಯೊಂದಿಗೆ 18 ದಿನಗಳ ಮುಂಗಾರು ಅಧಿವೇಶನ ಸೋಮವಾರ ಆರಂಭವಾಗಿದೆ.

ಪ್ರಧಾನಮಂತ್ರಿ ನರೇಂದ್ರ ಮೋದಿ ಸಂಪ್ರದಾಯದಂತೆ ಸಂಸತ್ತಿನ ಕಲಾಪದ ಮೊದಲು ಹೇಳಿಕೆಯನ್ನು ನೀಡಿದ್ದು, ಚೀನಾ ಗಡಿ ಬಿಕ್ಕಟ್ಟಿನ ಕುರಿತು ಪ್ರಬಲ ಸಂದೇಶವನ್ನು ನೀಡಿದರು.

ಸಂಸತ್ತು ಹಾಗೂ ಎಲ್ಲ ಸದಸ್ಯರು ಒಗ್ಗೂಡಿ ದೇಶವು ನಮ್ಮ ಸೈನಿಕರೊಂದಿಗೆ ನಿಂತಿದೆ ಎಂಬ ಸಂದೇಶವನ್ನು ರವಾನಿಸುತ್ತದೆ ಎಂಬ ವಿಶ್ವಾಸ ನಮಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಪ್ರಶ್ನೋತ್ತರ ಅವಧಿ ರದ್ದುಗೊಳಿಸುವ ನಿರ್ಣಯವನ್ನು ಇಂದು ಬೆಳಗ್ಗೆ ಮಂಡಿಸಲಾಯಿತು.

 "ಇದು ಅಸಾಧಾರಣ ಪರಿಸ್ಥಿತಿ. ಅಸೆಂಬ್ಲಿಗಳು ಒಂದೇ ದಿನ ಭೇಟಿಯಾಗಲು ಸಿದ್ಧವಿಲ್ಲದಿದ್ದಾಗ ನಾವು ಸುಮಾರು 800-850 ಸಂಸದರೊಂದಿಗೆ ಇಲ್ಲಿ ಭೇಟಿಯಾಗುತ್ತಿದ್ದೇವೆ. ಸರಕಾರವನ್ನು ಪ್ರಶ್ನಿಸಲು ಹಲವು ಮಾರ್ಗಗಳಿವೆ. ಸರಕಾರ ಚರ್ಚೆಯಿಂದ ಓಡಿಹೋಗುತ್ತಿಲ್ಲ''ಎಂದು ಸಂಸದೀಯ ವ್ಯವಹಾರ ಸಚಿವ ಪ್ರಹ್ಲಾದ್‌ಜೋಶಿ ಲೋಕಸಭೆಯಲ್ಲಿ ಹೇಳಿದರು.

"ಸರಕಾರವನ್ನು ಪ್ರಶ್ನಿಸಲು ಶೂನ್ಯ ವೇಳೆಯನ್ನು ಬಳಸಿಕೊಳ್ಳಬಹುದು'' ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.

ಕೊರೋನ ವೈರಸ್ ಬಿಕ್ಕಟ್ಟಿನಿಂದಾಗಿ ಈ ಬಾರಿ ಸರ್ವಪಕ್ಷಗಳ ಸಭೆ ನಡೆಸಲಾಗಿಲ್ಲ ಎಂದು ರವಿವಾರ ಕೇಂದ್ರ ಸರಕಾರ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News