ಪ್ರಧಾನಿಯ 70ನೇ ಹುಟ್ಟುಹಬ್ಬದ ದಿನ ಸಾಮಾಜಿಕ ಜಾಲತಾಣದಲ್ಲಿ 'ರಾಷ್ಟ್ರೀಯ ನಿರುದ್ಯೋಗ ದಿನ' ಟ್ರೆಂಡಿಂಗ್

Update: 2020-09-17 06:37 GMT

ಹೊಸದಿಲ್ಲಿ: ಇಂದು ಪ್ರಧಾನಿ ನರೇಂದ್ರ ಮೋದಿ  ತಮ್ಮ 70ನೇ ಹುಟ್ಟುಹಬ್ಬವನ್ನು ಆಚರಿಸುತ್ತಿದ್ದಾರೆ.  ಈ ದಿನವನ್ನು ಸಾಮಾಜಿಕ ಜಾಲತಾಣಿಗರು ವಿಶಿಷ್ಟವಾಗಿ, ಅಂದರೆ ರಾಷ್ಟ್ರೀಯ ನಿರುದ್ಯೋಗ ದಿನವನ್ನಾಗಿ ಆಚರಿಸುತ್ತಿದ್ದಾರೆ.

ದೇಶದಲ್ಲಿ ಹೆಚ್ಚುತ್ತಿರುವ ನಿರುದ್ಯೋಗ ಪ್ರಮಾಣವನ್ನು ವಿರೋಧಿಸಿ ಹಾಗೂ ನಿರುದ್ಯೋಗಿ ಯುವಜನತೆಗೆ ಬೆಂಬಲವಾಗಿ ನಿಲ್ಲುವ ಸಲುವಾಗಿ ರಾಷ್ಟ್ರೀಯ ನಿರುದ್ಯೋಗ ದಿನ ಅಥವಾ ರಾಷ್ಟ್ರೀಯ ಬೇರೋಜ್ಗಾರ್ ದಿವಸ್ ಇಂದು ಟ್ವಿಟರ್‍ನಲ್ಲಿ ಟ್ರೆಂಡಿಂಗ್ ಆಗಿದೆ.

ಅಂತೆಯೇ ರಾಷ್ಟ್ರೀಯ ಬೇರೋಜ್ಗಾರ್ ಸಪ್ತಾಹ ಕೂಡ ಇಂದು ಅಂತ್ಯವಾಗುತ್ತಿದೆ. ಈ ವಾರದಾದ್ಯಂತ ಯುವಜನತೆ ತಾವು ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ  ಸರಕಾರಕ್ಕೆ ವಿವಿಧ ರೀತಿಯಲ್ಲಿ ಮನವರಿಕೆ ಮಾಡಲು ಪ್ರಯತ್ನಿಸಿದೆ. #NationalUnemploymentDay  ಹ್ಯಾಶ್ ಟ್ಯಾಗ್ ನಡಿ 20 ಲಕ್ಷಕ್ಕೂ (2.3 ಮಿಲಿಯನ್) ಹೆಚ್ಚು ಟ್ವೀಟ್ ಗಳನ್ನು ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News