'ಮಾರ್ಗಸೂಚಿಗಳನ್ನು ಸುದರ್ಶನ್ ಟಿವಿಗೆ ಮಾತ್ರ ಸೀಮಿತಗೊಳಿಸಿ': ಸುಪ್ರೀಂಗೆ ಅಫಿಡವಿಟ್‍ನಲ್ಲಿ ತಿಳಿಸಿದ ಕೇಂದ್ರ

Update: 2020-09-17 08:36 GMT

ಹೊಸದಿಲ್ಲಿ: ಆಡಳಿತಾತ್ಮಕ ಸೇವೆಗಳಲ್ಲಿ ‘ಮುಸ್ಲಿಮರ ಒಳನುಸುಳುವಿಕೆಯ’ ಹಿಂದಿನ ಸಂಚನ್ನು ಬಯಲುಗೊಳಿಸುವ ಕಾರ್ಯಕ್ರಮವೆಂದು ಹೇಳಿಕೊಂಡು ಸುದರ್ಶನ್ ಟಿವಿ ಪ್ರಸಾರ ಮಾಡಿದ `ಬಿಂದಾಸ್ ಬೋಲ್' ಕಾರ್ಯಕ್ರಮಕ್ಕೆ ತಡೆ ನೀಡುವ  ವೇಳೆ ನೀಡಲಾಗಿರುವ ಮಾರ್ಗಸೂಚಿಗಳನ್ನು ಸುದರ್ಶನ್ ಟಿವಿಗಷ್ಟೇ ಸೀಮಿತಗೊಳಿಸಬೇಕು ಹಾಗೂ ಉಳಿದ ಮುಖ್ಯವಾಹಿನಿ ಮಾಧ್ಯಮಕ್ಕೆ ಯಾವುದೇ ಇತರ ಮಾರ್ಗಸೂಚಿಗಳನ್ನು ಸೂಚಿಸದಂತೆ ಕೇಂದ್ರ ಸುಪ್ರೀಂ ಕೋರ್ಟಿಗೆ ಹೇಳಿದೆ.

“ಪತ್ರಕರ್ತರ ಸ್ವಾತಂತ್ರ್ಯ ಮತ್ತು ಜವಾಬ್ದಾರಿಯುತ ಪತ್ರಿಕೋದ್ಯಮದ ನಡುವೆ ಸಮತೋಲನ ಸಾಧಿಸುವ ಕೆಲಸವನ್ನು ಸಂಸತ್ತಿನ  ಶಾಸನಬದ್ಧ ನಿಬಂಧನೆಗಳು ಅಥವಾ ನ್ಯಾಯಾಲಯಗಳ ತೀರ್ಪುಗಳು ಮಾಡಿವೆ'' ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಸುಪ್ರೀಂ ಕೋರ್ಟಿಗೆ ಸಲ್ಲಿಸಿರುವ ಅಫಿಡವಿಟ್‍ನಲ್ಲಿ ಹೇಳಿದೆ.

“ಸುದರ್ಶನ್ ಟಿವಿ ಕುರಿತ ಅಪೀಲನ್ನು ಆ ನಿರ್ದಿಷ್ಟ ಚಾನೆಲ್ ಗೆ ಸೀಮಿತಗೊಳಿಸಬೇಕು ಹಾಗೂ ಮಾನ್ಯ ನ್ಯಾಯಾಲಯವು   ಇನ್ನೂ ಹೆಚ್ಚಿನ ಮಾರ್ಗಸೂಚಿಗಳನ್ನು  ಒಬ್ಬ ಅಮಿಕಸ್ ಹಾಗೂ ಹಲವು ಜನರನ್ನು ಅಮಿಕಸ್ ಆಗಿ ನೇಮಕ ಮಾಡಿ ಅಥವಾ ಮಾಡದೆ  ನೀಡಬಾರದು'' ಎಂದು ಸರಕಾರ ಹೇಳಿದೆ.

``ಪ್ರತಿಯೊಂದು ಪ್ರಕರಣದ ಸನ್ನಿವೇಶವನ್ನಾಧರಿಸಿ ಅದಕ್ಕೆ ತಕ್ಕಂತೆಯೇ ನಿರ್ಧರಿಸಬೇಕು ಹಾಗೂ  ಎಲ್ಲಾ ಮಾಧ್ಯಮಗಳಿಗೆ ಅದನ್ನು ವಿಸ್ತರಿಸುವುದು  ಸರಿಯಲ್ಲ” ಎಂದೂ ಸಚಿವಾಲಯ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News