ಕೊರೋನದಿಂದ ಮೃತಪಟ್ಟವರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಲಿದೆ ಈ ರಾಜ್ಯ

Update: 2020-09-17 15:07 GMT

ಕೊಲ್ಕತ್ತಾ: ಕೋವಿಡ್-19 ಸೋಂಕಿಗೆ ಬಲಿಯಾದವರ ಮೃತದೇಹಗಳನ್ನು ಸೀಲ್ ಮಾಡಲ್ಪಟ್ಟ ಬಾಡಿ ಬ್ಯಾಗ್ ‍ಗಳಲ್ಲಿ ಹಾಕಿ  ಕುಟುಂಬಗಳಿಗೆ ಹಸ್ತಾಂತರಿಸಲು ಹಾಗೂ  ಚಿತಾಭಸ್ಮವನ್ನು ಸಂಗ್ರಹಿಸಲು ಅನುಮತಿಸುವ ಮೊದಲ ರಾಜ್ಯ ಪಶ್ಚಿಮ ಬಂಗಾಳವಾಗಲಿದೆ.

ಕೋವಿಡ್‍ನಿಂದ ಮೃತಪಟ್ಟವರ ಕಳೇಬರಗಳನ್ನು ಬಾಡಿ ಬ್ಯಾಗ್ ‍ಗಳಲ್ಲಿ ಹಾಕಿ ಹಾಗೂ ಮುಖ ಕಾಣುವಂತೆ ಮುಖದ ಭಾಗ ಪಾರದರ್ಶಕವಾಗುವಂತೆ ಮಾಡಿ ಕುಟುಂಬಗಳಿಗೆ ಹಸ್ತಾಂತರಿಸಿ ಮೃತದೇಹಗಳನ್ನು ಸಾಗಿಸಿದ ವಾಹನಗಳನ್ನು ಸ್ಯಾನಿಟೈಸ್ ಮಾಡುವಂತೆ ರಾಜ್ಯ ಸರಕಾರಕ್ಕೆ ಕೊಲ್ಕತ್ತಾ ಹೈಕೋರ್ಟ್ ಬುಧವಾರ ಆದೇಶಿಸಿತ್ತು. ಆದರೆ ಚಿತಾಭಸ್ಮವನ್ನು ಸಂಗ್ರಹಿಸಲು ಅನುಮತಿಯನ್ನು ನೀಡಲು ರಾಜ್ಯ ಸರಕಾರವೇ ನಿರ್ಧರಿಸಿದೆ. ಸ್ಥಳೀಯಾಡಳಿತಗಳಿಗೆ ಅರ್ಜಿ ಸಲ್ಲಿಸಿ ಈ ಪ್ರಕ್ರಿಯೆ ನಡೆಸಬಹುದೆಂದು ಸರಕಾರ ಹೇಳಿದೆ.

ಕೋವಿಡ್ ಸೋಂಕಿಗೆ ಬಲಿಯಾದವರ ಮೃತದೇಹಗಳನ್ನು ಕುಟುಂಬಗಳಿಗೆ ಹಸ್ತಾಂತರಿಸಬೇಕೆಂದು ಕೋರಿ ಸಲ್ಲಿಸಲಾಗಿದ್ದ ಪಿಐಎಲ್ ಮೇಲೆ  ಬುಧವಾರ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ ಬಿ ರಾಧಾಕೃಷ್ಣನ್ ನೇತೃತ್ವದ ವಿಭಾಗೀಯ ಪೀಠ ಮೇಲಿನಂತೆ ಆದೇಶಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News