ತನ್ನ ‘ಪರ' ಹೆಚ್ಚು ಮತ ಬಿದ್ದಿಲ್ಲ ಎಂದು ಟ್ವಿಟರ್ ಪೋಲ್ ಡಿಲಿಟ್ ಮಾಡಿ ನಗೆಪಾಟಲಿಗೀಡಾದ ‘ರಿಪಬ್ಲಿಕ್ ಭಾರತ್’

Update: 2020-09-19 06:45 GMT

ಮುಂಬೈ: ತನಗೆ ಅನುಕೂಲಕರವಾದ ಫಲಿತಾಂಶ ಬಂದಿಲ್ಲ ಎಂಬ ಕಾರಣಕ್ಕೆ ಅರ್ನಬ್ ಗೋಸ್ವಾಮಿಯ ‘ರಿಪಬ್ಲಿಕ್ ಭಾರತ್’ ತಾನು ನಡೆಸಿದ್ದ ಟ್ವಿಟರ್ ಪೋಲ್ ಅನ್ನು ಶುಕ್ರವಾರ ಡಿಲೀಟ್ ಮಾಡಿ ಟ್ವಿಟರಿಗರಿಂದ ನಗೆಪಾಟಲಿಗೀಡಾಗಿದೆ.

“ಪ್ರಶ್ನೆಗಳನ್ನು ಕೇಳದಂತೆ ಅರ್ನಬ್ ಗೋಸ್ವಾಮಿಯನ್ನು ತಡೆಯಬೇಕೆಂದು ಮಹಾರಾಷ್ಟ್ರ ಸರಕಾರ ಬಯಸಿದೆ. ಸತ್ಯದ ಅನ್ವೇಷಣೆಯಲ್ಲಿ ನೀವು ಅರ್ನಬ್ ಜತೆ ಇದ್ದೀರಾ?'' ಎಂಬ ಪ್ರಶ್ನೆಯನ್ನು ಈ ಟ್ವಿಟರ್ ಪೋಲ್ ನಲ್ಲಿ ಕೇಳಲಾಗಿತ್ತು.

ಆರಂಭಿಕ ಹಂತದಲ್ಲಿ ಹಲವರು ‘ಹೌದು' ಎಂದು ಪ್ರತಿಕ್ರಿಯೆ ನೀಡಿದ್ದರೆ ನಂತರ ಫಲಿತಾಂಶದಲ್ಲಿ  ‘ಹೌದು’ ಎಂದು ಹೇಳುವವರಿಗಿಂತ ‘ಇಲ್ಲ' ಎಂದು ಹೇಳುವವರೇ ಅಧಿಕವಾದರಲ್ಲದೆ, ಅಂತಿಮವಾಗಿ ಶೇ 53ರಷ್ಟು ಮಂದಿ ‘ಇಲ್ಲ' ಎಂದಿದ್ದರೆ ಉಳಿದವರು ‘ಹೌದು' ಎಂದಿದ್ದರು.

ಫಲಿತಾಂಶ ಈ ರೀತಿ ಬಂದ ಬಳಿಕ ರಿಪಬ್ಲಿಕ್ ಭಾರತ್ ತನ್ನ ಪೋಲ್ ಅನ್ನು ಡಿಲಿಟ್ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News