ಟಿಕ್‌ಟಾಕ್, ವಿಚ್ಯಾಟ್ ನಿಷೇಧದ ವಿರುದ್ಧ ಪ್ರತಿ ಕ್ರಮ: ಅಮೆರಿಕಕ್ಕೆ ಚೀನಾ ಎಚ್ಚರಿಕೆ

Update: 2020-09-19 17:04 GMT

ಬೀಜಿಂಗ್,ಸೆ.19: ಟಿಕ್‌ಟಾಕ್ ಹಾಗೂ ವಿಚ್ಯಾಟ್ ಆ್ಯಪ್‌ಗಳನ್ನು ನಿಷೇಧಿಸಿರುವ ಅಮೆರಿಕದ ಕ್ರಮವನ್ನು ಚೀನಾವು ಶನಿವಾರ ತೀವ್ರವಾಗಿ ಖಂಡಿಸಿದ್ದು, ಚೀನಿ ಕಂಪೆನಿಗಳ ಹಿತಾಸಕ್ತಿಗಳನ್ನು ರಕ್ಷಿಸಲು ಪ್ರತಿರೋಧ ಕ್ರಮಗಳನ್ನು ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

‘‘ಯಾವುದೇ ಪುರಾವೆಗಳಿಲ್ಲದೆ ಅನಪೇಕ್ಷಿತ ಕಾರಣಗಳಿಗಾಗಿ ಅಮೆರಿಕವು ಆಡಳಿವು, ಎರಡು ಉದ್ಯಮಗಳನ್ನು ಹತ್ತಿಕ್ಕಲು ಯತ್ನಿಸುತ್ತಿದೆ ಹಾಗೂ ಅವುಗಳ ಸಾಮಾನ್ಯ ಔದ್ಯಮಿಕ ಚಟುವಟಿಕೆಗನ್ನು ಗಂಭೀರವಾಗಿ ಅಸ್ತವ್ಯಸ್ತಗೊಳಿಸಿದೆ’’ ಎಂದು ಚೀನಾದ ವಾಣಿಜ್ಯ ಸಚಿವಾಲಯವು ಹೇಳಿಕೆಯೊಂದರಲ್ಲಿ ತಿಳಿಸಿದೆ. ಇದರಿಂದಾಗಿ ಅಮೆರಿಕದಲ್ಲಿ ಹೂಡಿಕೆ ವಾತಾವರಣದ ಬಗ್ಗೆ ಅಂತಾರಾಷ್ಟ್ರೀಯ ಹೂಡಿಕೆದಾರರಲ್ಲಿನ ವಿಶ್ವಾಸ ಕುಗ್ಗುವಂತೆ ಮಾಡಿದೆ ಹಾಗೂ ಜಾಗತಿಕ ಮಟ್ಟದಲ್ಲಿ ಸಹಜವಾದ ಆರ್ಥಿಕ ಹಾಗೂ ವಾಣಿಜ್ಯ ವ್ಯವಸ್ಥೆಗೆ ಧಕ್ಕೆಯುಂಟಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

 ಒಂದು ವೇಳೆ ಅಮೆರಿಕವು ಅದರದ್ದೇ ಆದ ದಾರಿಯಲ್ಲಿ ಸಾಗಿದಲ್ಲಿ, ಚೀನಿ ಕಂಪೆನಿಗಳ ಕಾನೂನುಬದ್ಧ ಹಕ್ಕುಗಳು ಹಾಗೂ ಹಿತಾಸಕ್ತಿಗಳನ್ನು ರಕ್ಷಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಚೀನಾದ ವಾಣಿಜ್ಯ ಸಚಿವಾಲಯವು ಎಚ್ಚರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News