ಇಂಡೋನೇಶ್ಯ: ಮರಣ ದಂಡನೆಗೆ ಒಳಗಾದ ವ್ಯಕ್ತಿ ಸುರಂಗದ ಮೂಲಕ ಪರಾರಿ!

Update: 2020-09-22 14:24 GMT
ಸಾಂದರ್ಭಿಕ ಚಿತ್ರ

ಟಂಗೆರಂಗ್ (ಇಂಡೋನೇಶ್ಯ), ಸೆ. 22: ಇಂಡೋನೇಶ್ಯದಲ್ಲಿ ಮರಣ ದಂಡನೆಗೆ ಒಳಗಾಗಿರುವ ಚೀನಾದ ಮಾದಕದ್ರವ್ಯ ಕಳ್ಳಸಾಗಣೆದಾರನೊಬ್ಬ, ರಾಜಧಾನಿ ಜಕಾರ್ತದ ಜೈಲೊಂದರಿಂದ 30 ಮೀಟರ್ ಸುರಂಗದ ಮೂಲಕ ಪರಾರಿಯಾಗಿರುವ ಘಟನೆ ವರದಿಯಾಗಿದೆ.

110 ಕಿಲೋಗ್ರಾಮ್ ಮೆಥಾಮ್‌ಫೆಟಮೈನ್ ಮಾದಕದ್ರವ್ಯವನ್ನು ಕಳ್ಳಸಾಗಣೆ ಮಾಡಿರುವುದಕ್ಕಾಗಿ ಕೈ ಜಿ ಫಾನ್ ಎಂಬಾತನಿಗೆ 2017ರಲ್ಲಿ ಮರಣ ದಂಡನೆ ವಿಧಿಸಲಾಗಿತ್ತು.

ಅವನು ಕಳೆದ ವಾರ ಬ್ಯಾಂಟನ್ ಎಂಬಲ್ಲಿರುವ ಟಂಗೆರಂಗ್ ಜೈಲಿನಿಂದ ಕಿರಿದಾದ ಸುರಂಗವೊಂದರ ಮೂಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ. ಈ ಸುರಂಗವನ್ನು ಸಮೀಪದ ಚರಂಡಿಗೆ ಜೋಡಿಸಲಾಗಿತ್ತು.

ಅವನು 2017ರಲ್ಲೂ ಒಮ್ಮೆ ಜೈಲಿನಿಂದ ತಪ್ಪಿಸಿಕೊಂಡಿದ್ದನು. ಅವನನ್ನು ವಿಚಾರಣೆಗಾಗಿ ಜೈಲಿನಲ್ಲಿ ಇರಿಸಿದ್ದಾಗ ಶೌಚಾಲಯದ ಗೋಡೆಗೆ ಕನ್ನ ಕೊರೆದು ಪರಾರಿಯಾಗಿದ್ದನು. ಆದರೆ, ಅವನನ್ನು ಮೂರು ದಿನಗಳ ಬಳಿಕ ಪಶ್ಚಿಮ ಜಾವಾದಲ್ಲಿ ಮತ್ತೆ ಬಂಧಿಸಲಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News