ವಿಧಾನಸಭೆಯಲ್ಲಿ 'ವಾರ್ತಾಭಾರತಿ' ಸಂಪಾದಕೀಯ, ಸುದ್ದಿಗಳನ್ನು ಉಲ್ಲೇಖಿಸಿದ ಸಿದ್ದರಾಮಯ್ಯ

Update: 2020-09-22 16:34 GMT

ಬೆಂಗಳೂರು, ಸೆ. 22: ಕೊರೋನ ಸೋಂಕಿನ ನಿರ್ವಹಣೆ ಹಾಗೂ ನಿಯಂತ್ರಣ ವಿಚಾರದ ಬಗ್ಗೆ ವಿಧಾನಸಭೆಯಲ್ಲಿಂದು ಮಾತನಾಡಿದ ವಿರೋಧ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 'ವಾರ್ತಾಭಾರತಿ' ಪತ್ರಿಕೆಯಲ್ಲಿ ಪ್ರಕಟವಾದ ಸಂಪಾದಕೀಯ ಮತ್ತು ಕೆಲ ಸುದ್ದಿಗಳನ್ನು ಉಲ್ಲೇಖಿಸಿ ಮಾತನಾಡಿದರು.

ಮಂಗಳವಾರ ವಿಧಾನಸಭೆಯಲ್ಲಿ ನಿಯಮ 69ರಡಿ ಕೊರೋನ ಸೋಂಕಿನ ನಿರ್ವಹಣೆ ಹಾಗೂ ನಿಯಂತ್ರಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳನ್ನು ಪ್ರಸ್ತಾಪಿಸಿದ ಅವರು, ಆಸ್ಪತ್ರೆಗಳ ಅವ್ಯವಸ್ಥೆ, ಬೆಡ್‍ಗಳು ಸಿಗದಿರುವುದು, ಆಸ್ಪತ್ರೆಗಳಿಂದ ಆಸ್ಪತ್ರೆಗಳಿಗೆ ಅಲೆದಾಟ, ಸೋಂಕಿತರನ್ನು ನಡೆಸಿಕೊಳ್ಳುತ್ತಿದ್ದ ರೀತಿಯ ಬಗ್ಗೆ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ವಾರ್ತಾಭಾರತಿ ಪತ್ರಿಕೆಯಲ್ಲಿ ಪ್ರಕಟವಾದ 'ಕೊರೋನ ರುದ್ರನಾಟಕ' ಸಂಪಾದಕೀಯ, 'ಲಾಕ್‍ಡೌನ್ ತಂದಿಟ್ಟ ಸಂಕಷ್ಟ: 6 ಲಕ್ಷ ದೋಬಿಗಳ ಹೊಟ್ಟೆಗೆ ತಣ್ಣೀರು ಬಟ್ಟೆ', 'ಕೊಳೆಯುತ್ತಿದೆ ಸಿಹಿಕುಂಬಳ' ಸೇರಿದಂತೆ ಹಲವು ವರದಿಗಳನ್ನು ಉಲ್ಲೇಖಿಸಿ ರಾಜ್ಯ ಸರಕಾರದ ವೈಫಲ್ಯಗಳ ಬಗ್ಗೆ ವಿವರಿಸಿದರು. 

ಸೋಂಕಿತರು ನರಳುತ್ತಿದ್ದರೂ ಸರಕಾರ, ಮಂತ್ರಿಗಳ ಹೃದಯ ಕೆಲಸ ಮಾಡಲಿಲ್ಲ. ಕೇವಲ ಬಾಯಿ ಮಾತಿನ ಹೇಳಿಕೆಗಳಲ್ಲೇ ನಾಲ್ಕೈದು ತಿಂಗಳು ಕಳೆದವು ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News