ಮಾದಕ ವಸ್ತು ಮಾರಾಟ: ವಿದೇಶಿ ಪ್ರಜೆ ಸೇರಿ ಪೆಡ್ಲರ್ ಗಳ ಬಂಧನ

Update: 2020-09-22 16:44 GMT

ಬೆಂಗಳೂರು, ಸೆ.22: ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಜಾಲವನ್ನು ಭೇದಿಸಿರುವ ಹೆಣ್ಣೂರು ಪೊಲೀಸರು, ಓರ್ವ ವಿದೇಶಿ ಪ್ರಜೆ ಹಾಗೂ ನಾಲ್ವರು ಪೆಡ್ಲರ್‍ಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುಡಾನ್ ದೇಶದ ಅಹ್ಮದ್ ಸಯೀದ್(27), ತಬಶೀರ್.ಕೆ(24), ಲಾಝಿಮ್ ನಾಸಿರ್(23), ಶಾಕೀರ್(24) ಹಾಗೂ ಶಿಹಾಮ್(28) ಬಂಧಿತ ಆರೋಪಿಗಳಾಗಿದ್ದಾರೆ ಎಂದು ಡಿಸಿಪಿ ಡಾ.ಎಸ್.ಡಿ.ಶರಣಪ್ಪ ತಿಳಿಸಿದ್ದಾರೆ.

ಪೂರ್ವ ವಿಭಾಗದ ಪೊಲೀಸ್ ಠಾಣಾ ವ್ಯಾಪ್ತಿಗಳಲ್ಲಿ ಮಾದಕ ವಸ್ತು ಮಾರಾಟ ಮತ್ತು ಸೇವನೆ ಮಾಡುತ್ತಿರುವವರ ವಿರುದ್ಧ ವಿಶೇಷ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು, ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯ ಹೆಣ್ಣೂರು ಮುಖ್ಯರಸ್ತೆ ಚೇಳಿಕೆರೆ ಮೇಗನಪಾಳ್ಯದಲ್ಲಿರುವ ಕ್ರೌನ್‍ಪ್ಲಾಜಾನಲ್ಲಿರುವ ಸರ್ವೀಪ್ ಅಪಾರ್ಟ್‍ಮೆಂಟ್‍ನಲ್ಲಿ ಮಾದಕ ವಸ್ತು ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

50 ಗ್ರಾಂ ತೂಕದ 100 ಜುರಾಸಿಸ್ ಮಾತ್ರೆ, 10 ಗ್ರಾಂ ಎಂಡಿಎಂ ಕ್ರಿಸ್ಟಲ್ ಮುಂತಾದ 5 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News