ಕೃಷಿ ವಿಧೇಯಕಗಳ ಬಗ್ಗೆ ತಪ್ಪು ಅಭಿಪ್ರಾಯದಿಂದ ರೈತರ ಪ್ರತಿಭಟನೆ : ದುಷ್ಯಂತ್ ಚೌಟಾಲ

Update: 2020-09-23 09:32 GMT

ಚಂಡೀಗಢ : ತಪ್ಪು ಅಭಿಪ್ರಾಯಗಳಿಂದಾಗಿ ರೈತರು ಕೇಂದ್ರ ಸರಕಾರದ ಕೃಷಿ ವಿಧೇಯಕದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆಂದು ಹರಿಯಾಣದ ಉಪಮುಖ್ಯಮಂತ್ರಿ ದುಷ್ಯಂತ್ ಸಿಂಗ್ ಚೌಟಾಲ ಹೇಳಿದ್ದಾರೆ.

ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಬೆಂಬಲ ಸೂಚಿಸದ ಚೌತಾಲ ರಾಜೀನಾಮೆ ನೀಡಬೇಕೆಂಬ ಆಗ್ರಹದ ಹಿನ್ನೆಲೆಯಲ್ಲಿ ಅವರ ಈ ಹೇಳಿಕೆ ಬಂದಿದೆ. ಸ್ವತಃ ಚೌತಾಲ ಅವರ ಜನನಾಯಕ್ ಜನತಾ ಪಕ್ಷದ ಹಲವರು ಪ್ರತಿಭಟನೆ ನಡೆಸುತ್ತಿರುವ ರೈತರ ಬೆಂಬಲಕ್ಕೆ ನಿಂತಿದ್ದಾರೆ.

``ರೈತರು ಕನಿಷ್ಠ ಬೆಂಬಲ ಬೆಲೆ ಕಳೆದುಕೊಳ್ಳಲಿದ್ದಾರೆಂಬ ಸಂಶಯವನ್ನು ಅವರ ಮನಸ್ಸಿನಲ್ಲಿ ಮೂಡಿಸಲಾಯಿತು,. ನಮ್ಮ ಕಡೆಯಿಂದ ಈ ಸಂಶಯ ನಿವಾರಿಸಲು ಯತ್ನಿಸುತ್ತಿದ್ದೇವೆ. ಸರಕಾರ ಅವರ ಬೆಳೆಗಳನ್ನು ಕನಿಷ್ಠ ಬೆಂಬಲ ಬೆಲೆಯಲ್ಲಿ ಖರೀದಿಸಲಿದೆ ಹಾಗೂ ರೈತ ಅತ್ಯಂತ ಖುಷಿಯಲ್ಲಿರುವ ವ್ಯಕ್ತಿಯಾಗುತ್ತಾನೆ,'' ಎಂದು ದುಷ್ಯಂತ್ ಹೇಳಿದ್ದಾರೆ.

ಕನಿಷ್ಠ ಬೆಂಬಲ ಬೆಲೆಯನ್ನು ಏರಿಸಿದ ಕೇಂದ್ರದ ಕ್ರಮವನ್ನು ಶ್ಲಾಘಿಸಿದ ಅವರು ``ಈ ರೀತಿ ಕನಿಷ್ಠ ಬೆಂಬಲ ಬೆಲೆಯನ್ನು ಈ ಹಿಂದೆ ಏರಿಸಿರಲಿಲ್ಲ, ರೈತರ ಆರ್ಥಿಕ ಸ್ಥಿತಿ ಹೇಗೆ ಉತ್ತಮವಾಗಬೇಕೆಂದು ಚೌಧುರಿ ದೇವಿ ಲಾಲ್ ನಮಗೆ ಕಲಿಸಿದ್ದಾರೆ. ರೈತರ ಕೈಗಳನ್ನು ಬಲಪಡಿಸುವುದು ನಮ್ಮೆಲ್ಲರ ಕರ್ತವ್ಯ,'' ಎಂದು ಅವರು ಹೇಳಿದರು.

''ಅಕ್ಟೋಬರ್ 1ರಿಂದ ರೈತರ ಭತ್ತದ ಬೆಳೆಗಳನ್ನು ಎಂಎಸ್‍ಪಿಯಲ್ಲಿ ಖರೀದಿಸಲು ಆರಂಭಿಸಿದಾಗ ರೈತರ ಸಂಶಯ ನಿವಾರಣೆಯಾಗುವುದು,'' ಎಂದರು.

ಇಬ್ಬರು ಜೆಜೆಪಿ ಶಾಸಕರು ರೈತರ ಪ್ರತಿಭಟನೆಗಳಲ್ಲಿ ಭಾಗಿಯಾಗಿರುವ ಕುರಿತು ಪ್ರತಿಕ್ರಿಯಿಸಿದ ಅವರು `` ರೈತರಾದವರೆಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು,'' ಎಂದಷ್ಟೇ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News