×
Ad

ಜಲಮಂಡಳಿ: 100 ಕೋಟಿ ರೂ. ಬಾಕಿ ವಸೂಲಿ

Update: 2020-09-26 18:30 IST

ಬೆಂಗಳೂರು, ಸೆ.26: ಬೆಂಗಳೂರು ಜಲಮಂಡಳಿ ಕಳೆದ ಮೂರು ತಿಂಗಳಲ್ಲಿ ಬಾಕಿ ಉಳಿದಿದ್ದ 100 ಕೋಟಿ ರೂ. ಬಾಕಿ ನೀರಿನ ಬಿಲ್ಲನ್ನು ಸಂಗ್ರಹಿಸಿದೆ.

ಕೊರೋನ ಹಿನ್ನೆಲೆ ಕಳೆದ ಮೂರು ತಿಂಗಳಲ್ಲಿ ಬಾಕಿ ಉಳಿದಿದ್ದ ಹಣವನ್ನು ಸಂಗ್ರಹಿಸಿದ್ದೇವೆ, ಜುಲೈ ನಲ್ಲಿ 31.82 ಕೋಟಿ, ಆಗಸ್ಟ್ ನಲ್ಲಿ 36.46 ಕೋಟಿ ಹಾಗೂ ಸೆಪ್ಟಂಬರ್ 24 ರವೆರೆಗೆ 40.08 ಕೋಟಿ ಹಣ ಹಣ ವಸೂಲಿ ಮಾಡಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಎನ್. ಜಯರಾಮ್ ತಿಳಿಸಿದ್ದಾರೆ.

ಅಲ್ಲದೇ ವಾಣಿಜ್ಯ ಮತ್ತು ಸರಕಾರಿ ಸಂಸ್ಥೆಗಳು ಹಾಗೂ ನಾಗರಿಕರ ಹಣ ಸಂಗ್ರಹಿಸಿರುವ ಜಲ ಮಂಡಳಿ 43 ಸಾವಿರ ಅನಧಿಕೃತ ನೀರು ಮತ್ತು ನೈರ್ಮಲ್ಯ ಸಂಪರ್ಕಗಳನ್ನು ಪತ್ತೆ ಹಚ್ಚಿದೆ ಎಂದು ತಿಳಿಸಿದರು.

ನೀರು ಮತ್ತು ನೈರ್ಮಲ್ಯ ಬಿಲ್‍ಗಳಿಂದ ಮಂಡಳಿಯ ಮಾಸಿಕ ಆದಾಯ 100 ರಿಂದ 110 ಕೋಟಿ ರೂ. ಇರುತ್ತದೆ, ಹೆಚ್ಚಿನ ವಾಣಿಜ್ಯ ಸಂಸ್ಥೆಗಳು ಈಗ ಸಂಗ್ರಹಣೆಗೆ ಅನುಕೂಲವಾಗುವಂತೆ ಬಾಗಿಲು ತೆರೆಯಲು ಪ್ರಾರಂಭಿಸಿವೆ ಎಂದು ಹೇಳಿದ್ದಾರೆ.

ಬಾಕಿ ಉಳಿದಿರುವ ಜೊತೆಗೆ, ಅಧಿಕಾರಿಗಳು 10,344 ಅಕ್ರಮ ನೀರಿನ ಸಂಪರ್ಕಗಳನ್ನು ಮತ್ತು 32,858 ಅನಧಿಕೃತ ನೈರ್ಮಲ್ಯ ಸಂಪರ್ಕಗಳನ್ನು ಸಹ ಪತ್ತೆ ಮಾಡಿದ್ದಾರೆ. ಜುಲೈ ಅಂತ್ಯದ ವೇಳೆಗೆ, ಮಂಡಳಿಯು 20,000 ಕ್ಕೂ ಹೆಚ್ಚು ಅಕ್ರಮ ಸಂಪರ್ಕಗಳನ್ನು ಗುರುತಿಸಿತ್ತು ಮತ್ತು ಅವುಗಳನ್ನು ತೆಗೆದು ಹಾಕಿದೆ. ಲಿಖಿತ ಅನುಮತಿಯಿಲ್ಲದೆ ತಮ್ಮ ಒಳಚರಂಡಿಯನ್ನು ಬಿಡಬ್ಲ್ಯೂಎಸ್‍ಎಸ್ಬಿಯೊಂದಿಗೆ ಸಂಪರ್ಕಿಸುವ ಮನೆಗಳು ಅಥವಾ ಸಂಸ್ಥೆಗಳು 5,000 ರೂ.ಗಳ ದಂಡವನ್ನು ನೈರ್ಮಲ್ಯ ಸೆಸ್ ಆಗಿ ಪಾವತಿಸಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News