ಅಝರೆಂಕಾ ಗೆಲುವಿಗೆ ಅಡ್ಡಿಯಾಗದ ಮಳೆ

Update: 2020-09-28 07:00 GMT

ಪ್ಯಾರಿಸ್, ಸೆ.28: ರೋಲ್ಯಾಂಡ್ ಗ್ಯಾರೊಸ್‌ನಲ್ಲಿ ಫ್ರೆಂಚ್ ಓಪನ್‌ನ ಮೊದಲ ಸುತ್ತಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ್ದರೂ, ವಿಶ್ವದ ಮಾಜಿ ನಂಬರ್ ಒನ್ ಮಹಿಳಾ ಟೆನಿಸ್ ತಾರೆ ಬೆಲಾರಸ್‌ನ ವಿಕ್ಟೋರಿಯಾ ಅಝರೆಂಕಾ ಗೆಲುವು ದಾಖಲಿಸುವ ಮೂಲಕ ಎರಡನೇ ಸುತ್ತು ಪ್ರವೇಶಿಸಿದ್ದಾರೆ.

31ರ ಹರೆಯದ 10ನೇ ಶ್ರೇಯಾಂಕದ ಆಟಗಾರ್ತಿ ಅಝರೆಂಕಾ ಅವರು ವಿಶ್ವದ 74ನೇ ಶ್ರೇಯಾಂಕಿತ ಡಾಂಕಾ ಕೊವಿನಿಕ್‌ರನ್ನು 6-1, 6-2 ಸೆಟ್‌ಗಳಿಂದ ಮಣಿಸಿದರು.

ಇತ್ತೀಚಿಗೆ ನಡೆದ ಯುಎಸ್ ಓಪನ್‌ನಲ್ಲಿ ರನ್ನರ್ ಅಪ್ ಆಗಿರುವ ಅಝರೆಂಕಾ ಅವರು ಕೊರೋನ ವೈರಸ್ ನಿರ್ಬಂಧಗಳಿಂದಾಗಿ ಪ್ರೇಕ್ಷರಿಲ್ಲದ ಟೆನಿಸ್ ಕೋರ್ಟ್‌ನಲ್ಲಿ ಆಡಿ ಜಯ ಸಾಧಿಸಿದರು. ಅಝರೆಂಕಾ ಕೇವಲ ಒಂದು ಗಂಟೆ ಆಟದಲ್ಲಿ ಎದುರಾಳಿಗೆ ಸೋಲುಣಿಸಿ ಎರಡನೇ ಸುತ್ತು ಪ್ರವೇಶಿಸಿದರು. ಮಳೆ, ಚಳಿಯ ಪ್ರತಿಕೂಲ ವಾತಾವರಣದಲ್ಲಿ ಆಟ ಆಡಲು ಸಾಧ್ಯವಾಗದೆ 15 ನಿಮಿಷಗಳ ಕಾಲ ಪಂದ್ಯವನ್ನು ಸ್ಥಗಿತಗೊಳಿಸಲಾಗಿತ್ತು. ಮತ್ತೆ ಆಟ ಆರಂಭಗೊಂಡಾಗ ಅಝರೆಂಕಾ ಮೇಲುಗೈ ಸಾಧಿಸಿ ಗೆಲುವಿನ ನಗೆ ಬೀರಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News