ಕೃಷಿ ಮಸೂದೆಯ ಮುಕ್ತ ವ್ಯಾಪಾರ ನೀತಿಗೆ ಉಲ್ಟಾ ಹೊಡೆದ ಖಟ್ಟರ್

Update: 2020-09-29 06:47 GMT

ಚಂಡೀಗಡ, ಸೆ.29: ಹರಿಯಾಣ ಸರಕಾರವು ಹರಿಯಾಣದ ರೈತರ ಕುರಿತು ಕಾಳಜಿ ವಹಿಸಬೇಕಿದೆ ಹಾಗೂ ಇತರ ರಾಜ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಈ ತಿಂಗಳಾರಂಭದಲ್ಲಿ ಹೇಳಿದ್ದ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಇತರ ರಾಜ್ಯಗಳಿಂದ ಬೆಳೆಗಳನ್ನು ಖರೀದಿಸಲು ನಿರಾಕರಿಸಿದ್ದರು. ಖಟ್ಟರ್ ಅವರ ವೀಡಿಯೊ ಹೇಳಿಕೆಯು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ವಿವಾದಾತ್ಮಕ ಕೃಷಿ ಕಾನೂನುಗಳ ಕಲ್ಪನೆಗೆ ವಿರುದ್ಧವಾಗಿದೆ. ಇದು ಮಾರುಕಟ್ಟೆಗಳಲ್ಲಿ ತಡೆ ಮುಕ್ತ ವ್ಯಾಪಾರ ಹಾಗೂ ರೈತರ ಆಯ್ಕೆಯ ಬೆಲೆಗಳಿಗೆ ಭರವಸೆ ನೀಡುತ್ತದೆ.

ಕೃಷಿ ಕಾನೂನುಗಳನ್ನು ಶ್ಲಾಘಿಸುವಾಗ ಮುಖ್ಯಮಂತ್ರಿ ಖಟ್ಟರ್ ಸೆಪ್ಟಂಬರ್ 17ರಂದು ಈ ವಿಚಾರ ತಿಳಿಸಿದರು.

ಹರಿಯಾಣ ರೈತರ ಮೆಕ್ಕೆಜೋಳ ಹಾಗೂ ಬಜ್ರಾವನ್ನು ಸಂಪೂರ್ಣವಾಗಿ ಖರೀದಿಸಲಾಗಿದೆಯೇ ಎಂದು ನಾವು ಖಚಿತಪಡಿಸುತ್ತೇವೆ. ಇತರ ರಾಜ್ಯಗಳ ರೈತರು ಅದನ್ನು ನಮ್ಮ ರಾಜ್ಯದಲ್ಲಿ ಮಾರಾಟ ಮಾಡುವುದರಿಂದ ಪ್ರಯೋಜನ ಪಡೆಯುವುದನ್ನು ನಾವು ಬಿಡುವುದಿಲ್ಲ. ನಮ್ಮ ರಾಜ್ಯದ ರೈತರ ಬಗ್ಗೆ ನಾವು ಕಾಳಜಿವಹಿಸಬೇಕು.ಇತರ ರಾಜ್ಯಗಳ ಬಗ್ಗೆ ಚಿಂತಿಸಬೇಕಾಗಿಲ್ಲ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News