ಕೊರೋನ ವೈರಸ್‌ನಿಂದ ಜಾಗತಿಕ 10 ಲಕ್ಷ ಸಾವು

Update: 2020-09-29 17:05 GMT

ನ್ಯೂಯಾರ್ಕ್, ಸೆ. 29: ಕೊರೋನ ವೈರಸ್‌ನಿಂದಾಗಿ ಜಗತ್ತಿನಾದ್ಯಂತ 10 ಲಕ್ಷ ಸಾವುಗಳು ಸಂಭವಿಸಿರುವುದು ‘ದುಃಖದಾಯಕ ಮೈಲಿಗಲ್ಲಾಗಿದೆ’ ಎಂದು ವಿಶ್ವಸಂಸ್ಥೆಯ ಮಹಾಕಾರ್ಯದರ್ಶಿ ಆಂಟೋನಿಯೊ ಗುಟೆರಸ್ ಹೇಳಿದ್ದಾರೆ.

ಅಮೆರಿಕದ ಜಾನ್ಸ್ ಹಾಪ್‌ಕಿನ್ಸ್ ವಿಶ್ವವಿದ್ಯಾನಿಲಯವು ಸಂಗ್ರಹಿಸಿರುವ ಅಂಕಿಅಂಶಗಳ ಪ್ರಕಾರ, ಜಗತ್ತಿನಾದ್ಯಂತ ಕೋವಿಡ್-19 ಸಾಂಕ್ರಾಮಿಕದಿಂದಾಗಿ ಮೃತಪಟ್ಟವರ ಸಂಖ್ಯೆ 10 ಲಕ್ಷವನ್ನು ದಾಟಿದೆ. ಅದೇ ವೇಳೆ, 3.3 ಕೋಟಿಗೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ ಹಾಗೂ 2.3 ಕೋಟಿಗೂ ಅಧಿಕ ಮಂದಿ ಚೇತರಿಸಿಕೊಂಡಿದ್ದಾರೆ.

‘‘ನಮ್ಮ ಜಗತ್ತು ದುಃಖದಾಯಕ ಮೈಲಿಗಲ್ಲೊಂದನ್ನು ತಲುಪಿದೆ. ಕೋರೋನ ವೈರಸ್‌ನಿಂದಾಗಿ 10 ಲಕ್ಷ ಪ್ರಾಣಗಳು ನಷ್ಟವಾಗಿವೆ. ಇದು ಆಘಾತಕಾರಿ ಸಂಖ್ಯೆಯಾಗಿದೆ. ಅವರು ತಂದೆಯಂದಿರು, ತಾಯಂದಿರು, ಪತ್ನಿಯರು, ಗಂಡಂದಿರು, ಸಹೋದರರು, ಸಹೋದರಿಯರು, ಸ್ನೇಹಿತರು ಮತ್ತು ಸಹೋದ್ಯೋಗಿಗಳಾಗಿದ್ದರು’’ ಎಂದು ಹೇಳಿಕೆಯೊಂದರಲ್ಲಿ ಗುಟೆರಸ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News