ಇರಾಕ್: ಗುರಿ ತಪ್ಪಿದ ರಾಕೆಟ್ ಬಡಿದು 5 ನಾಗರಿಕರ ಸಾವು

Update: 2020-09-29 17:20 GMT

ಬಗ್ದಾದ್ (ಇರಾಕ್), ಸೆ. 29: ಅಮೆರಿಕದ ಸೈನಿಕರಿದ್ದ ಬಗ್ದಾದ್ ವಿಮಾನ ನಿಲ್ದಾಣವನ್ನು ಗುರಿಯಾಗಿಸಿ ಹಾರಿಸಲಾದ ರಾಕೆಟೊಂದು ಗುರಿ ತಪ್ಪಿ ಮನೆಯೊಂದಕ್ಕೆ ಅಪ್ಪಳಿಸಿದಾಗ ಒಂದೇ ಕುಟುಂಬದ ಮೂವರು ಮಕ್ಕಳು ಮತ್ತು ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ ಎಂದು ಇರಾಕ್ ಸೇನೆ ತಿಳಿಸಿದೆ.

ಇರಾಕ್ ನಲ್ಲಿರುವ ಅಮೆರಿಕನ್ ಹಿತಾಸಕ್ತಿಗಳನ್ನು ಗುರಿಯಾಗಿಸಿ ಹಲವು ಸಮಯದಿಂದ ರಾಕೆಟ್ ದಾಳಿಗಳು ನಡೆಯುತ್ತಿವೆ. ರಾಕೆಟ್ ದಾಳಿಗಳು ನಿಲ್ಲದಿದ್ದರೆ ಬಗ್ದಾದ್ ‌ನಲ್ಲಿರುವ ರಾಯಭಾರ ಕಚೇರಿಯನ್ನು ಮುಚ್ಚುವುದಾಗಿಯೂ, ದೇಶದಲ್ಲಿರುವ 3,000 ಸೈನಿಕರನ್ನು ಹಿಂದಕ್ಕೆ ಕರೆಸಿಕೊಳ್ಳುವುದಾಗಿಯೂ ಅಮೆರಿಕ ಬೆದರಿಕೆ ಹಾಕಿದ ಬಳಿಕವೂ ದಾಳಿಗಳು ಮುಂದುವರಿದಿವೆ.

ಕಳೆದ ವರ್ಷ ನಡೆದ ದಾಳಿಗಳಲ್ಲಿ ಗಮನಾರ್ಹ ಸಾವು-ನೋವುಗಳೇನೂ ವರದಿಯಾಗಿಲ್ಲ. ಆದರೆ, ಸೋಮವಾರದ ದಾಳಿಯಲ್ಲಿ ಗಮನಾರ್ಹ ಸಂಖ್ಯೆಯಲ್ಲಿ ನಾಗರಿಕರು ಮೃತಪಟ್ಟಿದ್ದಾರೆ.

ಈ ರಾಕೆಟ್ ದಾಳಿಗೆ ಯಾರೂ ಹೊಣೆ ಹೊತ್ತುಕೊಂಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News