'ಮಾಸ್ಕ್' ದಂಡ ಹೆಚ್ಚಳಕ್ಕೆ ಸಾರ್ವಜನಿಕರ ಆಕ್ರೋಶ

Update: 2020-10-01 14:03 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.1: ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾಸ್ಕ್ ಧರಿಸುವುದನ್ನು ಸರಕಾರ ಕಡ್ಡಾಯಗೊಳಿಸಿ, ಧರಿಸದಿರುವವರಿಗೆ 200 ರೂ. ದಂಡ ವಿಧಿಸಿತ್ತು. ಆದರೂ ಸಾರ್ವಜನಿಕರು ಮಾಸ್ಕ್ ಹಾಕದೇ ಓಡಾಡುತ್ತಿರುವ ಹಿನ್ನೆಲೆ 200 ರೂ.ನಿಂದ 1 ಸಾವಿರ ರೂ.ಗೆ ಏರಿಕೆ ಮಾಡಿದೆ. ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗುರುವಾರ ಕತ್ರಿಗುಪ್ಪೆ ಸರ್ಕಲ್‍ನಲ್ಲಿ ಮಾರ್ಷಲ್‍ಗಳು ಕಾರ್ಯಾಚರಣೆ ನಡೆಸುತ್ತಿದ್ದು, ಮಾಸ್ಕ್ ಹಾಕದ ವಾಹನ ಸವಾರರಿಗೆ ದಂಡ ಹಾಕಿದ್ದಾರೆ. ಈ ವೇಳೆ ಕೆಲವರು ಮಾರ್ಷಲ್‍ಗಳೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ.

ಅಧಿವೇಶನದಲ್ಲಿ ಸ್ಪೀಕರ್ ಹೇಳಿದರೂ ರಾಜಕಾರಣಿಗಳು ಮಾಸ್ಕ್ ಹಾಕುತ್ತಿರಲಿಲ್ಲ. ನಮಗೆ ಒಂದು ಸಾವಿರ ದಂಡ ಹಾಕುವುದಾದರೆ ರಾಜಕಾರಣಿಗಳಿಗೆ 10 ಸಾವಿರ ರೂ. ದಂಡ ಹಾಕಲಿ. ಮೊದಲೇ ಕೊರೋನ ಸಂದರ್ಭ, ಯಾರ ಬಳಿಯೂ ದುಡ್ಡಿಲ್ಲ. ಇಂತಹ ಸಂದರ್ಭದಲ್ಲಿ 1 ಸಾವಿರ ದಂಡ ಹಾಕುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News