ಕೋವಿಡ್ ಚಿಕಿತ್ಸೆಗಾಗಿ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲು

Update: 2020-10-03 18:05 GMT

ವಾಷಿಂಗ್ಟನ್: ಕೊರೋನ ವೈರಸ್ ಸೋಂಕಿನಿಂದ ಬಳಲುತ್ತಿರುವ ಅಮೆರಿಕದ ಪ್ರಥಮ ಪ್ರಜೆ ಡೊನಾಲ್ಡ್ ಟ್ರಂಪ್ ಅವರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದ್ದು, ಅವರಿಗೆ ಪ್ರಯೋಗಾತ್ಮಕ ಕೋವಿಡ್-19 ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ.

ಟ್ರಂಪ್ ಹಾಗೂ ಮೆಲಾನಿಯಾ ಟ್ರಂಪ್ ಅವರಿಗೆ ಕೊರೋನ ವೈರಸ್ ಸೋಂಕು ತಗುಲಿರುವ ಸುದ್ದಿ ಪ್ರಕಟಗೊಂಡ ಬಳಿಕ ಸಾರ್ವಜನಿಕವಾಗಿ ಟ್ರಂಪ್ ಕಾಣಿಸಿಕೊಂಡಿರಲಿಲ್ಲ. ಆದರೆ ಶುಕ್ರವಾರ ಸಂಜೆ ಮಾಸ್ಕ್ ಧರಿಸಿ ಶ್ವೇತಭವನದಿಂದ ಹೊರಬಂದ ಟ್ರಂಪ್, ಹೆಲಿಕಾಪ್ಟರ್ ಮೂಲಕ ವಾಲ್ಟರ್ ರೀಡ್ ಮಿಲಿಟರಿ ಆಸ್ಪತ್ರೆಗೆ ತೆರಳಿದರು.

ಶ್ವೇತಭವನದ ಒಳಗೆ ಚಿತ್ರಿಸಲಾದ 18 ಸೆಕೆಂಡ್‌ಗಳ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಬಿಡುಗಡೆ ಮಾಡಿರುವ ಟ್ರಂಪ್ ಮೌನ ಮುರಿದು, "ನನ್ನನ್ನು ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಆದರೆ ನಾನು ಕ್ಷೇಮವಾಗಿದ್ದೇನೆ" ಎಂದು ಸ್ಪಷ್ಟಪಡಿಸಿದ್ದಾರೆ. ದೇಶದ ಪ್ರಥಮ ಮಹಿಳೆ ಕೂಡಾ ಚೆನ್ನಾಗಿದ್ದಾರೆ ಎಂದು ವಿವರಿಸಿದ್ದಾರೆ.

ಮುಂದಿನ ಕೆಲ ದಿನಗಳ ವರೆಗೆ ಟ್ರಂಪ್ ಅವರು ವಾಲ್ಟರ್ ರೀಡ್ ಆಸ್ಪತ್ರೆಯ ಅಧ್ಯಕ್ಷೀಯ ಕಚೇರಿಯಿಂದ ಕೆಲಸ ಮಾಡುವಂತೆ ವೈದ್ಯಕೀಯ ತಜ್ಞರು ಸಲಹೆ ನೀಡಿದ್ದಾಗಿ ಪತ್ರಿಕಾ ಕಾರ್ಯದರ್ಶಿ ಕೆಲಿಹ್ ಮೆಕಾನಿ ಹೇಳಿದ್ದಾರೆ. ಅಧ್ಯಕ್ಷರಿಗೆ ಕಂಡುಬಂದಿರುವ ಅಲ್ಪ ಪ್ರಮಾಣದ ರೋಗಲಕ್ಷಣ ಕಡಿಮೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.
 
 ಟ್ರಂಪ್ ಅವರಿಗೆ ಕೊರೋನ ಸೋಂಕು ತಗಲಿರುವುದು ಅಮೆರಿಕದ ರಾಜಕೀಯ ವಲಯವನ್ನು ತಲ್ಲಣಗೊಳಿಸಿದೆ. ಅಧ್ಯಕ್ಷೀಯ ಚುನಾವಣೆಗೆ ಕೇವಲ ಒಂದು ತಿಂಗ ಳಿರುವಾಗಲೇ, ಟ್ರಂಪ್ ಅವರು ಆಸ್ಪತ್ರೆಗೆ ದಾಖಲಾಗಿರುವುದು ಚುನಾವಣಾ ಪ್ರಚಾರ ಕಾವು ಕಳೆದುಕೊಳ್ಳುವಂತೆ ಮಾಡಿದೆ. ಟ್ರಂಪ್ ಎದುರಾಳಿ ರಿಪಬ್ಲಿಕನ್ ಅಭ್ಯರ್ಥಿ ಜೊಬಿಡೆನ್ ಶುಕ್ರವಾರ ಹೇಳಿಕೆಯೊಂದನ್ನು ನೀಡಿ ಟ್ರಂಪ್ ಹಾಗೂ ಅವರ ಕುಟುಂಬವು ಸೋಂಕಿನಿಂದ ಗುಣಮುಖಗೊಳ್ಳಲೆಂದು ಪ್ರಾರ್ಥಿಸುವುದಾಗಿ ತಿಳಿಸಿದರು. ಎದುರಾಳಿ ಟ್ರಂಪ್ ಅವರನ್ನು ಟೀಕಿಸುವ ಎಲ್ಲಾ ಚುನಾವಣಾ ಜಾಹೀರಾತುಗಳನ್ನು ಹಿಂತೆಗೆದುಕೊಳ್ಳುವುದಾಗಿಯೂ ಬಿಡೆನ್ ಅವರ ಚುನಾವಣಾ ಪ್ರಚಾರ ವಿಭಾಗ ತಿಳಿಸಿದೆ.

ಆದಾಗ್ಯೂ ತಾನು ಕೊರೋನ ವೈರಸ್ ಸೋಂಕನ್ನು ಲಘುವಾಗಿ ಪರಿಗಣಿಸದಂತೆ ಅಮೆರಿಕನ್ ಜನತೆಯನ್ನು ನಿರಂತರವಾಗಿ ಪ್ರೇರೇಪಿಸುತ್ತಿದ್ದುದಾಗಿ ಬಿಡೆನ್ ನೆನಪಿಸಿಕೊಂಡಿದ್ದಾರೆ.

 ಕಾವು ಕಳೆದುಕೊಂಡ ಅಧ್ಯಕ್ಷೀಯ ಚುನಾವಣಾ ಪ್ರಚಾರ

ಈ ಮಧ್ಯೆ ಬಿಡೆನ್ ಅವರು ಕೂಡಾ ಕೊರೋನ ಸೋಂಕಿನ ತಪಾಸಣೆಗೊಳಗಾಗಿದ್ದು, ಅವರಿಗೆ ನೆಗೆಟಿವ್ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News