​ಟಿ-20 ಕ್ರಿಕೆಟ್‌ಗೆ ಸ್ಪಿನ್ ಮಾಂತ್ರಿಕನ ಸಲಹೆ ಏನು ಗೊತ್ತೇ ?

Update: 2020-10-03 04:12 GMT

ದುಬೈ : ಟಿ-20 ಕ್ರಿಕೆಟ್ ಇನ್ನಷ್ಟು ಉತ್ತಮವಾಗಿ ಬೆಳೆಯಲು ಮತ್ತು ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳ ನಡುವೆ ಇನ್ನಷ್ಟು ಸ್ಪರ್ಧಾತ್ಮಕತೆ ಬೆಳೆಸಲು ಅನುವಾಗುವಂತೆ ಆಸ್ಟ್ರೇಲಿಯಾದ ಮಾಜಿ ಲೆಗ್‌ಸ್ಪಿನ್ನರ್ ಮತ್ತು ರಾಜಸ್ಥಾನ ರಾಯಲ್ಸ್ ಮೆಂಟರ್ ಆಗಿರುವ ಶೇನ್ ವಾರ್ನ್ ಮೂರು ಸಲಹೆಗಳನ್ನು ನೀಡಿದ್ದಾರೆ.

ಮೈದಾನದ ಹೊರವರ್ತುಲದಲ್ಲಿ ಹುಲ್ಲು ಉಳಿಸಿಕೊಳ್ಳಲು ಸಾಧ್ಯವಾಗದಿದ್ದರೆ ಬೌಂಡರಿ ಗಾತ್ರವನ್ನು ಹೆಚ್ಚಿಸಬೇಕು ಎನ್ನುವುದು ಅವರು ನೀಡಿರುವ ಮೊದಲ ಸಲಹೆ. ಟ್ವಿಟ್ಟರ್‌ನಲ್ಲಿ ಈ ಸಲಹೆ ನೀಡಿರುವ ವಾರ್ನ್, "ಬೌಂಡರಿ ಗಾತ್ರವನ್ನು ಎಲ್ಲ ಮೈದಾನಗಳಲ್ಲಿ ಹೆಚ್ಚಿಸಬೇಕು ಹಾಗೂ ಸಣ್ಣ ಮೈದಾನಗಳಲ್ಲಿ ಹೊರವರ್ತುಲದಲ್ಲಿ ಉದ್ದದ ಹುಲ್ಲು ಬೆಳೆಸಬೇಕು" ಎಂದು ಅಭಿಪ್ರಾಯಪಟ್ಟಿದ್ದಾರೆ.

ಅಂತೆಯೇ ಬೌಲರ್‌ಗಳಿಗೆ ಗರಿಷ್ಠ 4 ಓವರ್ ಬದಲು 5 ಓವರ್‌ಗಳಿಗೆ ಅವಕಾಶ ಮಾಡಿಕೊಡಬೇಕು ಎಂದು ಕೂಡಾ ಸಲಹೆ ಮಾಡಿದ್ದಾರೆ. ನಮಗೆಲ್ಲ ಬೇಕಾಗಿರುವುದು ಬ್ಯಾಟ್ ಹಾಗೂ ಬಾಲ್ ನಡುವಿನ ಸ್ಪರ್ಧೆಯೇ ವಿನಃ ಕೇವಲ ಸಿಕ್ಸ್‌ಗಳಲ್ಲ ಎಂದು ಹೇಳಿದ್ದಾರೆ.

ಈ ಸಲಹೆಗಳನ್ನು ಮಾಜಿ ಕ್ರಿಕೆಟಿಗರಾದ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಸ್ಟೀಫನ್ ಫ್ಲೆಮಿಂಗ್, ಮಾರ್ಕ್ ವಾ, ಮೆಲ್ ಜೋನ್ಸ್ ಮತ್ತು ಇಷಾ ಗುಹಾ ಅವರಿಗೂ ಟ್ಯಾಗ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News