ಕೆಪಿಸಿಸಿ ವತಿಯಿಂದ ಗಾಂಧಿ ಸಂದೇಶ ಅಭಿಯಾನಕ್ಕೆ ಚಾಲನೆ

Update: 2020-10-03 11:19 GMT

ಬೆಂಗಳೂರು, ಅ.3: ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ವಿಚಾರಗಳು ಮತ್ತು ಸಂದೇಶಗಳು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಪಿಸಿಸಿ ವತಿಯಿಂದ ಗಾಂಧಿ ಸಂದೇಶ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಶನಿವಾರ ನಗರದ ನಗರದಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಚಾಲನೆ ನೀಡಿದರು. ಬಳಿಕ ಅವರು, ಮಹಾತ್ಮ ಗಾಂಧೀಜಿಯವರ 151ನೇ ಜನ್ಮದಿನದ ಅಂಗವಾಗಿ ಈ  ಕಾರ್ಯಕ್ರಮ ಆಯೋಜಿಸಿದ್ದು, ಇದೇ ತಿಂಗಳ 30ರವರೆಗೂ ಈ ಅಭಿಯಾನ ನಗರದ ಎಲ್ಲೆಡೆ ನಡೆಯಲಿದೆ ಎಂದರು.

ಜನ- ಕೇಂದ್ರಿತ ಉತ್ತಮ ಆಡಳಿತ ನೀಡುವ, ಜನರಿಗೆ ಉತ್ತಮ ಜೀವನಮಟ್ಟ ಕಲ್ಪಿಸುವ, ಪ್ರಕೃತಿ  ಗೌರವಿಸುವ, ಸಾಮರಸ್ಯದಿಂದ ಸಹಬಾಳ್ವೆ ನಡೆಸುವಂತಹ, ನೀತಿ ನಿರೂಪಕರ ಸುತ್ತ ಗಾಂಧಿ ತತ್ವಗಳು ಅನುರಣಿಸಬೇಕಾಗಿದೆ. ಹಾಗಾಗಿ, ಈ ಅಭಿಯಾನಕ್ಕೆ ಮುಂದಾಗಿದ್ದೇವೆ ಎಂದು ನುಡಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ವಿ.ಎಸ್.ಉಗ್ರಪ್ಪ, ವಿ.ಪರಿಷತ್ತಿನ ಸದಸ್ಯರಾದ ನಝೀರ್ ಅಹ್ಮದ್, ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ರಾಜ್ಯಾಧ್ಯಕ್ಷ ವೈ.ಸೈಯೀದ್ ಅಹ್ಮದ್, ಪುಪ್ಪ ಅಮರಾನಾಥ್, ಕಾಂಗ್ರೆಸ್ ಮುಖಂಡರಾದ ಇರ್ಶಾದ್ ಅಹ್ಮದ್ ಶೇಕ್, ಇಸಾಕ್ ಸೇಠ್ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News