ಸಂಚಾರ ನಿಯಮ ಉಲ್ಲಂಘನೆ: ಆರು ದಿನಗಳಲ್ಲಿ 2.35 ಕೋಟಿ ರೂ. ದಂಡ ಸಂಗ್ರಹ

Update: 2020-10-04 13:26 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ. 4: ಸಂಚಾರ ನಿಯಮ ಉಲ್ಲಂಘನೆ ಮಾಡಿದವರ ಪತ್ತೆಗೆ ಬಹುತೇಕ ಎಲ್ಲ ರಸ್ತೆಗಳಲ್ಲಿ ಕಾರ್ಯಾಚರಣೆ ಆರಂಭಿಸಿರುವ ಸಂಚಾರ ಪೊಲೀಸರು, ಆರು ದಿನಗಳಲ್ಲಿ 2.35 ಕೋಟಿ ದಂಡ ಸಂಗ್ರಹಿಸಿದ್ದಾರೆ.

ಸೆ.20ರಿಂದ 26ರ ವರೆಗೆ ನಗರದಲ್ಲಿ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ. ಸಂಚಾರ ನಿಯಮ ಉಲ್ಲಂಘಿಸಿದಕ್ಕಾಗಿ 55,717 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಂಟಿ ಕಮಿಷನರ್ (ಸಂಚಾರ) ಬಿ.ಆರ್.ರವಿಕಾಂತೇಗೌಡ ತಿಳಿಸಿದ್ದಾರೆ.

ಕೊರೋನ ಸೋಂಕು ಹರಡುವಿಕೆ ತಡೆಯುವ ಉದ್ದೇಶದಿಂದ ನೇರವಾಗಿ ದಂಡ ವಿಧಿಸುವ ಪ್ರಕ್ರಿಯೆಯನ್ನು ಈ ಹಿಂದೆ ಕೈಬಿಡಲಾಗಿತ್ತು. ಇದೀಗ ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಸಂಚಾರ ಪೊಲೀಸರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಚಾಲಕರನ್ನು ತಡೆದು ತಪಾಸಣೆ ಮಾಡಿ ಉಲ್ಲಂಘನೆ ಪ್ರಕರಣಗಳನ್ನು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದರು.

ಉಲ್ಲಂಘನೆ ಪ್ರಕರಣ ಸಂಗ್ರಹಿಸಿದ ದಂಡ (ಲಕ್ಷಗಳಲ್ಲಿ)

ಹೆಲ್ಮೆಟ್‍ ರಹಿತ ಚಾಲನೆ- 18,319 - 68.39

ಹಿಂಬದಿ ಸವಾರ ಹೆಲ್ಮೆಟ್ ಧರಿಸದಿರುವುದು 11,606- 43.58

ಸಿಗ್ನಲ್ ಜಂಪ್ 5,967- 21.33

ಜೀಬ್ರಾ ಕ್ರಾಸಿಂಗ್‍ನಲ್ಲಿ ನಿಲುಗಡೆ 1,177- 11.24

ಚಾಲನೆ ವೇಳೆ ಮೊಬೈಲ್ ಬಳಕೆ 1,620- 11.10

ಸೀಟ್ ಬೆಲ್ಟ್ ಹಾಕದಿರುವುದು  2,228- 10.33

ಏಕಮುಖ ರಸ್ತೆಯಲ್ಲಿ ವಿರುದ್ಧ ದಿಕ್ಕಿನಲ್ಲಿ ವಾಹನ ಚಾಲನೆ 2,684- 10.18 

ನಿಬರ್ಂಧಿತ ಸ್ಥಳದಲ್ಲಿ ವಾಹನ ನಿಲುಗಡೆ 715- 6.91

ದೋಷಪೂರಿತ ನೋಂದಣಿ ಸಂಖ್ಯೆ ಫಲಕ 1,662- 6.01

ಅತೀ ವೇಗದ ಚಾಲನೆ 336- 3.36

ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ 171- 1.66

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News