ಕುವೈತ್: ಐಎಸ್‌ಎಫ್ ನಿಂದ ಎರಡನೇ ಹಂತದ ರಕ್ತದಾನ ಶಿಬಿರ

Update: 2020-10-05 06:18 GMT

ಕುವೈತ್, ಅ.5: ಇಂಡಿಯನ್ ಸೋಶಿಯಲ್ ಪೋರಂ(ಐಎಸ್‌ಎಫ್) ಕುವೈತ್ ಮತ್ತು ಕುವೈತ್ ಸೆಂಟ್ರಲ್ ಬ್ಲಡ್ ಬ್ಯಾಂಕ್‌ ಜಾಬ್ರಿಯಾ ಇದರ ಜಂಟಿ ಸಹಯೋಗದಲ್ಲಿ ಎರಡನೇ ಹಂತದ ರಕ್ತದಾನ ಶಿಬಿರವು ಸೆ.25ರಂದು ಜಾಬ್ರಿಯಾದಲ್ಲಿರುವ ಕುವೈತ್‌ ಸೆಂಟ್ರಲ್ ಬ್ಲಡ್ ಬ್ಯಾಂಕ್‌ನಲ್ಲಿ ಜರಗಿತು.

ಶಿಬಿರವನ್ನು ಐಎಸ್ಎಫ್ ಕರ್ನಾಟಕ ಅಧ್ಯಕ್ಷ ಮುಸ್ತಕೀಂ ಶಿರೂರ್ ಮತ್ತು ಕಾರ್ಯದರ್ಶಿ ಅಶ್ಫಾಕ್ ಹುಸೇನ್ ಅವರ ಸಮ್ಮುಖದಲ್ಲಿ ಅಲ್ ದಫೇರಿ ರಿಯಲ್ ಎಸ್ಟೇಟ್ ಕಂಪೆನಿಯ ಎಂ.ಡಿ. ಮತ್ತು ಮೆಟ್ರೋ ಸೂಪರ್ ಮಾರ್ಕೆಟ್ಸ್ ಮಾಲಕ ಜರ್ರಾಹ್ ಹಮೂದ್ ಅಲ್ ದಫೇರಿ ಉದ್ಘಾಟಿಸಿದರು.

 ಸಮಾರೋಪದಲ್ಲಿ ಮಾತನಾಡಿದ ಸೆಂಟ್ರಲ್ ಬ್ಲಡ್ ಬ್ಯಾಂಕಿನ ವೈದ್ಯೆ ಡಾ.ಅಸ್ಮಾ ರಫಾತ್ ಮುಹಮ್ಮದ್ ಅವರು ಐಎಸ್‌ಎಫ್ ಕಾರ್ಯವೈಖರಿಯನ್ನು ಶ್ಲಾಘಿಸಿದರು.

ಐಎಸ್‌ಎಫ್ ಕುವೈತ್ನ ಉಪಾಧ್ಯಕ್ಷ ತಮೀಮ್ ಮೂಸಾ ವಂದಿಸಿದರು.  

ಮೊದಲ ಶಿಬಿರ ಸೆ.11ರಂದು ನಡೆದಿತ್ತು. ಎರಡು ಶಿಬಿರಗಳಿಂದ ಸುಮಾರು 250ಕ್ಕೂ ಹೆಚ್ಚು ಯೂನಿಟ್ ರಕ್ತ  ಸಂಗ್ರಹವಾಗಿದೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News