ಗಡಿಯಲ್ಲಿ ಯಾವುದೇ ಪರಿಸ್ಥಿತಿ ಎದುರಿಸಲು ಭಾರತೀಯ ವಾಯುಪಡೆ ಸನ್ನದ್ಧ : ಏರ್ ಚೀಫ್ ಮಾರ್ಷಲ್

Update: 2020-10-05 11:57 GMT

ಹೊಸದಿಲ್ಲಿ : ಯಾವುದೇ ಬೆದರಿಕೆಯನ್ನು ಎದುರಿಸಲು ಭಾರತೀಯ ವಾಯು ಸೇನೆ ಸನ್ನದ್ಧವಾಗಿದೆ ಹಾಗೂ ಪ್ರಸಕ್ತ ಪರಿಸ್ಥಿತಿಯನ್ನು ಗಮನದಲ್ಲಿರಿಸಿ ಎಲ್ಲಾ ಅಗತ್ಯ ಪ್ರದೇಶಗಳಲ್ಲಿ ಸೇನೆಯನ್ನು ಸಾಕಷ್ಟು ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ ಎಂದು ವಾಯುಸೇನೆ ಮುಖ್ಯಸ್ಥ ಆರ್ ಕೆ ಎಸ್ ಭದೂರಿಯಾ ಅವರು ಚೀನಾ ಜತೆಗೆ ಪೂರ್ವ ಲಡಾಖ್‌ನಲ್ಲಿನ ಗಡಿ ಉದ್ವಿಗ್ನತೆಯನ್ನು ಉಲ್ಲೇಖಿಸಿ ಹೇಳಿದ್ದಾರೆ.

ಅಕ್ಟೋಬರ್ 8ರಂದು ನಡೆಯಲಿರುವ ವಾಯುಸೇನಾ ದಿನಾಚರಣೆಯ ಹಿನ್ನೆಲೆಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಚೀನಾದ ವಾಯು ಪಡೆಯು ಭಾರತದ ಸಾಮರ್ಥ್ಯಗಳಿಗಿಂತ ಹೆಚ್ಚು ಸಾಮರ್ಥ್ಯ ಹೊಂದಿರದೇ ಇದ್ದರೂ ವಿರೋಧಿ ದೇಶದ ಸಾಮರ್ಥ್ಯವನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ ಎಂದರು.

ಭಾರತದ ವಾಯು ಸೇನೆಯು ಉತ್ತರದ ಹಾಗೂ ಪಶ್ಚಿಮದ ಗಡಿ ಪ್ರದೇಶಗಳೆರಡಲ್ಲೂ ಏಕಕಾಲದಲ್ಲಿ ಯುದ್ಧಕ್ಕೆ ಅಂತಹ ಸನ್ನಿವೇಶವೇನಾದರೂ ಎದುರಾದರೆ ಸನ್ನದ್ಧವಾಗಿದೆ ಎಂದು ಹೇಳಿದ ಅವರು ಭಾರತದ ವಾಯುಪಡೆಗೆ ರಫೇಲ್ ಜೆಟ್‌ಗಳ ಸೇರ್ಪಡೆ ಅದರ ಬಲವನ್ನು ಇನ್ನಷ್ಟು ಹೆಚ್ಚಿಸಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News