×
Ad

ಸಂಚಾರಿ ನಿಯಮ ಉಲ್ಲಂಘನೆ ಆರೋಪ: ಲೈಸನ್ಸ್ ರದ್ದುಗೊಳಿಸಿದ ಆರ್‍ಟಿಒ

Update: 2020-10-05 17:22 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.5: ಸಂಚಾರ ನಿಯಮ ಉಲ್ಲಂಘನೆ ಆರೊಪದಡಿ ವಾಹನ ಸವಾರರ ಲೈಸನ್ಸ್ ರದ್ದುಗೊಳಿಸಿ ಆರ್‍ಟಿಒ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ನಿರ್ಲಕ್ಷ್ಯವಾಗಿ ವಾಹನ ಚಾಲನೆ, ಮದ್ಯದ ಅಮಲಿನಲ್ಲಿ ಚಾಲನೆ ಹೀಗೆ ಸಂಚಾರ ನಿಯಮ ಉಲ್ಲಂಘಿಸಿದ ಆರೋಪದಡಿ ಸಂಚಾರ ಪೊಲೀಸರು ವಾಹನಗಳ ಜತೆಗೆ, ಸವಾರರ ಲೈಸನ್ಸ್ ಜಪ್ತಿ ಮಾಡಿದ್ದರು.

ತದನಂತರ, ಸಂಚಾರ ಪೊಲೀಸ್ ವಿಭಾಗದವರು ಲೈಸನ್ಸ್ ಗಳನ್ನು ಆರ್‍ಟಿಒಗೆ ರವಾನಿಸಿದ್ದರು. ಇದಾದ ಬಳಿಕ ನಿಯಮ ಮೀರಿದವರ ಲೈಸನ್ಸ್ ರದ್ದು ಮಾಡಿ ಆದೇಶ ಹೊರಡಿಸಲಾಗಿದೆ.

ಎಷ್ಟು ಲೈಸನ್ಸ್?: 2018ನೇ ಸಾಲಿನಲ್ಲಿ 19,431 ಡ್ರೈವಿಂಗ್ ಲೈಸನ್ಸ್ ಗಳ ಪ್ರತಿಗಳನ್ನು  ಸಂಚಾರ ಪೊಲೀಸರು ರವಾನಿಸಿದ್ದರು. ಈ ಪೈಕಿ 5,899ರಷ್ಟು ಲೈಸನ್ಸ್ ರದ್ದು ಮಾಡಲಾಗಿತ್ತು.

2019ನೇ ಸಾಲಿನಲ್ಲೂ 7,149 ಲೈಸನ್ಸ್ ರದ್ದು ಮಾಡಲು ಸಂಚಾರ ಪೊಲೀಸರು ಕೋರಿದ್ದರು. ಇದರಲ್ಲಿ ಕೇವಲ 944 ಲೈಸನ್ಸ್‍ಗಳನ್ನು ಆರ್‍ಟಿಒ ರದ್ದುಗೊಳಿಸಿದೆ. ಅದೇ ರೀತಿ, ಕಳೆದ ತಿಂಗಳಿನಲ್ಲಿ 3,900 ಲೈಸನ್ಸ್ ರದ್ದತಿಗೆ ಕಳಿಸಲಾಗಿತ್ತು. ಈಗ ಮತ್ತೆ 838 ಲೈಸನ್ಸ್ ರದ್ದು ಮಾಡಿ ಆರ್‍ಟಿಒ ಅಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News