×
Ad

ಕ್ರಿಕೆಟ್ ಬೆಟ್ಟಿಂಗ್ ಆರೋಪ: ಸಿಸಿಬಿ ಪೊಲೀಸರಿಂದ ನಾಲ್ವರ ಬಂಧನ

Update: 2020-10-06 17:24 IST

ಬೆಂಗಳೂರು, ಅ.6: ಹಣ ಪಣವಾಗಿ ಕಟ್ಟಿಕೊಂಡು, ಕ್ರಿಕೆಟ್ ಪಂದ್ಯದ ಸೋಲು-ಗೆಲುವು ಬಗ್ಗೆ ಜೂಜಾಟ ಆಡುತ್ತಿದ್ದ ಆರೋಪ ಸಂಬಂಧ ಮೂರು ಕಡೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.

ಪುಟ್ಟೇನಹಳ್ಳಿ, ಕೋಣನಕುಂಟೆ, ಬ್ಯಾಟರಾಯನಪುರ ಸೇರಿ 3 ಕಡೆಗಳಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಬೆಟ್ಟಿಂಗ್ ಬಗ್ಗೆ ಮಾಹಿತಿ ಸಂಗ್ರಹಿಸಿ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳು ಮೊಬೈಲ್ ಮುಖಾಂತರ ಬುಕ್ಕಿಗಳನ್ನು ಬರಮಾಡಿಕೊಂಡು ತಂಡದ ಸೋಲು-ಗೆಲುವು ಬಗ್ಗೆ ಬೆಟ್ಟಿಂಗ್‍ನಲ್ಲಿ ತೊಡಗಿದ್ದರು. ಬಂಧಿತರಿಂದ 6 ಮೊಬೈಲ್, 4 ಲಕ್ಷದ 91 ಸಾವಿರ ರೂ. ನಗದು ಜಪ್ತಿ ಮಾಡಿ ತನಿಖೆ ಕೈಗೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News