ರಫಿ ಅಹ್ಮದ್

Update: 2020-10-07 06:40 GMT

ಮಂಗಳೂರು, ಅ.7: ಪಣಂಬೂರು ಮುಸ್ಲಿಮ್ ಜಮಾಅತ್ ಎಂಬ ಹೆಸರಿನ ಕಾಟಿಪಳ್ಳ ಜುಮಾ ಮಸೀದಿ ಮತ್ತು ಅಲ್ ಮದ್ರಸತುನ್ನೂರಿಯ ಅರಬಿಕ್ ಶಾಲೆಯ ಅಧ್ಯಕ್ಷರಾಗಿದ್ದ ದಿವಂಗತ ಹಾಜಿ ಪಿ.ಎ.ಬಾವುಂಞಿಯವರ ಪುತ್ರ, ಕಾಟಿಪಳ್ಳ ನಿವಾಸಿ ರಫಿ ಅಹ್ಮದ್(58) ಮಂಗಳವಾರ ನಿಧನರಾಗಿದ್ದಾರೆ.

ಪ್ರಥಮ ಶ್ರೇಣಿ ಕಾಂಟ್ರಾಕ್ಟರ್ ಆಗಿದ್ದ ರಫಿ ಅಹ್ಮದ್ ಅವರು ಧಾರ್ಮಿಕ, ಸಾಮಾಜಿಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರಲ್ಲದೆ, ಪರೋಪಕಾರಿ ಮನೋಭಾವದರಾಗಿದ್ದರು. ಕಾಟಿಪಳ್ಳದ ರಿಲಯನ್ಸ್ ಅಸೋಸಿಯೇಶನ್, ಕೆನರಾ ಯೂತ್ ಕೌನ್ಸಿಲ್, ನೂರುಲ್ ಹುದಾ ಸಂಸ್ಥೆಗಳಲ್ಲಿ ಹಲವು ವರ್ಷಗಳ ಕಾಲ ಅಧ್ಯಕ್ಷರಾಗಿ, ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

ಕರ್ನಿರೆ ಕೆ.ಎಸ್.ಸಯ್ಯದ್ ಹಾಜಿಯವರ ಅಳಿಯ ಆಗಿದ್ದ ರಫಿ ಅಹ್ಮದ್ ಅವರು ಪತ್ನಿ, ಇಬ್ಬರು ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ