ಬಿ. ಫಾತಿಮಾ ಅಂಗರಗುಂಡಿ

Update: 2020-10-10 04:23 GMT

ಮಂಗಳೂರು, ಅ.10: ಬೈಕಂಪಾಡಿ ಅಂಗರಗುಂಡಿ ನಿವಾಸಿ ದಿವಂಗತ ಉಮರಬ್ಬ ಅವರ ಪತ್ನಿ ಬಿ.ಫಾತಿಮಾ(80) ಅಲ್ಪಕಾಲದ ಅಸೌಖ್ಯದಿಂದ ಶನಿವಾರ ಬೆಳಗ್ಗೆ ಮೂಡುಬಿದಿರೆಯ ಲಾಡಿ ಎಂಬಲ್ಲಿರುವ ಪುತ್ರಿಯ ಮನೆಯಲ್ಲಿ ನಿಧನರಾದರು.

ಮೃತರು ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್‌ನ ಉಪಾಧ್ಯಕ್ಷ ಸೈದುದ್ದೀನ್ ಸಹಿತ ಆರು ಮಂದಿ ಪುತ್ರರು, ಮೂವರು ಪುತ್ರಿಯರ ಸಹಿತ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

ಮೃತರ ಅಂತ್ಯ ಸಂಸ್ಕಾರವು ಬೈಕಂಪಾಡಿ ಮುಹಿಯುದ್ದೀನ್ ಜುಮಾ ಮಸೀದಿಯ ವಠಾರದಲ್ಲಿ ಇಂದು(ಅ.10) ಸಂಜೆ ಅಸರ್ ನಮಾಝ್‌ಗೆ ಮುಂಚಿತವಾಗಿ ನೆರವೇರಲಿದೆ.

ಮಯ್ಯತ್‌ನ ಅಂತಿಮ ದರ್ಶನಕ್ಕೆ ಮೂಡುಬಿದಿರೆಯ ಲಾಡಿಯಲ್ಲಿರುವ ಅವರ ಪುತ್ರಿಯ ಮನೆಯಲ್ಲಿ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ವಸಂತಿ