ರಾಜಧಾನಿಯಲ್ಲಿ ದಸರಾ: ಬಿಬಿಎಂಪಿಯಿಂದ ಮಾರ್ಗಸೂಚಿ ಬಿಡುಗಡೆ

Update: 2020-10-12 11:54 GMT

ಬೆಂಗಳೂರು, ಅ.12: ನಗರದಲ್ಲಿ ಕೊರೋನ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ರಾಜಧಾನಿಯಲ್ಲಿ ದಸರಾ ಪೂಜೆಗೆ ಅವಕಾಶವನ್ನು ನೀಡಲಾಗಿದೆಯಾದರೂ ಅನೇಕ ಷರತ್ತುಗಳು ಅನ್ವಯವಾಗಲಿವೆ ಎಂದು ಬಿಬಿಎಂಪಿ ಆಯುಕ್ತ ಎನ್.ಮಂಜುನಾಥ ಪ್ರಸಾದ್ ಹೇಳಿದ್ದಾರೆ.

ಸಾರ್ವಜನಿಕ ಹಾಲ್, ಪ್ರದೇಶದಲ್ಲಿ ದಸರಾ ಕಾರ್ಯಕ್ರಮ ಮಾಡುವುದಾದರೆ 200 ಜನಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಇನ್ನು ಮೈದಾನಗಳಲ್ಲಿ ದಸರಾ ಮಾಡುವುದಾದರೆ ಬಿಬಿಎಂಪಿ ಅನುಮತಿ ಬೇಕೇಬೇಕು ಎಂದು ತಿಳಿಸಿದ್ದಾರೆ.

ಕೊರೋನ ಹಿನ್ನೆಲೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಸುರಕ್ಷಿತ ಅಂತರ ಪಾಲಿಸಬೇಕು, ಸ್ಯಾನಿಟೈಸ್ ಮಾಡಬೇಕು, ಮಾಸ್ಕ್ ಧರಿಸಿರಬೇಕು ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News