ಕರ್ನಾಟಕ ರಾಜ್ಯ ಮುಕ್ತ ವಿವಿ: 2020-21ಶೇ ಶೈಕ್ಷಣಿಕ ಸಾಲಿನ ದಾಖಲಾತಿ ಆರಂಭ

Update: 2020-10-13 11:04 GMT

ಬೆಂಗಳೂರು, ಅ.13: ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ 2020-21ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದ್ದು, ಸ್ನಾತಕ, ಸ್ನಾತಕೋತ್ತರ ಕೋರ್ಸ್‍ಗಳಾದ ಬಿಎ, ಬಿಕಾಂ, ಎಂಎ, ಎಂಕಾಂ, ಬಿಎಲ್‍ಐಎಸ್ಸಿ, ಎಂಬಿಎ, ಪಿಜಿ ಡಿಪ್ಲೋಮಾ ಸೇರಿ ಮತ್ತಿತರ ಕೋರ್ಸ್‍ಗಳಿಗೆ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ.

ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಅಧಿಕೃತ ವೆಬ್‍ಸೈಟ್ www.ksoumysuru.ac.in ನಲ್ಲಿ ಅರ್ಜಿ ಭರ್ತಿ ಮಾಡಿ ನಂತರ ಡೌನ್‍ಲೋಡ್ ಮಾಡಿಕೊಂಡು ಪ್ರಾದೇಶಿಕ ಕೇಂದ್ರಗಳಲ್ಲಿ ಸಲ್ಲಿಸಿ ಪ್ರವೇಶಾತಿ ಪಡೆಯಬಹುದಾಗಿದೆ. ಪ್ರಥಮ ವರ್ಷದ ಈ ಮೇಲ್ಕಂಡ ಕೋರ್ಸ್‍ಗಳ ಪ್ರವೇಶಾತಿಗೆ ಅ.29 ಕಡೆಯ ದಿನವಾಗಿದೆ. 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಪ್ರಾದೇಶಿಕ ನಿರ್ದೇಶಕರು, ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಮಹಿಳಾ ಪ್ರಾದೇಶಿಕ ಕೇಂದ್ರ, ಸರಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜು, 4ನೇ ಮುಖ್ಯರಸ್ತೆ, 13ನೇ ಅಡ್ಡರಸ್ತೆ, ಮಲ್ಲೇಶ್ವರಂ, ಬೆಂ.03 ಹಾಗೂ ದೂ.080-23448811, 9844506629ಕ್ಕೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News