ಎರಡನೇ ದಿನಕ್ಕೆ ಕಾಲಿಟ್ಟ ಪಿಯು ಉಪನ್ಯಾಸಕರ ಅಹೋರಾತ್ರಿ ಧರಣಿ

Update: 2020-10-13 12:46 GMT

ಬೆಂಗಳೂರು, ಅ.13: ಪಿಯು ಉಪನ್ಯಾಸಕರ ನೇಮಕಾತಿ ಮುಗಿದರೂ ಇನ್ನೂ ಸಾವಿರಾರು ಉಪನ್ಯಾಸಕರಿಗೆ ಕಾಲೇಜು ಹಂಚಿಕೆ ಆಗಿರುವ ಆದೇಶ ಪತ್ರಿ ತಲುಪಿಲ್ಲ. ಈ ಹಿನ್ನೆಲೆ ಉಪನ್ಯಾಸಕರು ನಡೆಸುತ್ತಿರುವ ಅಹೋರಾತ್ರಿ ಧರಣಿ ಎರಡನೇ ದಿನಕ್ಕೆ ಕಾಲಿಟ್ಟಿದೆ.

ಸೋಮವಾರ ಇಡೀ ರಾತ್ರಿ ಮಳೆಯನ್ನೂ ಲೆಕ್ಕಿಸದೆ ಉಪನ್ಯಾಸಕರು ಪಿಯು ಬೋರ್ಡ್ ಮುಂಭಾಗದಲ್ಲಿ ನೂರಾರು ಉಪನ್ಯಾಸಕರು ಧರಣಿ ನಡೆಸಿದ್ದಾರೆ. 1,203 ಅಭ್ಯರ್ಥಿಗಳಿಗೆ ಈಗಾಗಲೇ ಕೌನ್ಸಿಲಿಂಗ್ ಮುಗಿದಿದೆ, ಆದರೆ ಆದೇಶ ಪ್ರತಿ ನೀಡದೆ ಶಿಕ್ಷಣ ಇಲಾಖೆ ಸತಾಯಿಸುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ.

ಸೋಮವಾರ ರಾತ್ರಿ ಪಿಯು ಬೋರ್ಡ್ ನಿರ್ದೇಶಕಿ ಸ್ನೇಹಲ್ ಉಪನ್ಯಾಸಕರ ಮನವಿ ಆಲಿಸಿ, ಇವತ್ತು ಸರಕಾರಕ್ಕೆ ಪತ್ರ ಬರೆಯುವುದಾಗಿ ಭರವಸೆ ನೀಡಿದರು. ಆದರೆ ಧರಣಿ ನಿರತ ಉಪನ್ಯಾಸಕರು ಆದೇಶ ಪ್ರತಿ ಕೊಡುವವರೆಗೂ ತೆರಳುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ.

ಸರಕಾರ ಕೂಡಲೆ ಸಮಸ್ಯೆ ಸರಿಪಡಿಸಲಿ

ಹೊಸದಾಗಿ ನೇಮಕಗೊಂಡಿರುವ 1,203 ಮಂದಿ ಉಪನ್ಯಾಸಕರು ಅಂತಿಮ ನೇಮಕಾತಿ ಆದೇಶ ನೀಡುವಂತೆ ಆಗ್ರಹಿಸಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರ ಕಚೇರಿಯ ಮುಂದೆ ಅ.12ರ ಸೋಮವಾರದ ಮುಂಜಾನೆಯಿಂದ ಉಪನ್ಯಾಸಕರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ಸರಕಾರ ಕೂಡಲೇ ಉಪನ್ಯಾಸಕರ ಅಹವಾಲು ಸ್ವೀಕರಿಸಿ ಸಮಸ್ಯೆ ಸರಿಪಡಿಸಲಿ.

-ಹೆಚ್.ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News