ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ: ದೂರು, ಮೇಲ್ವಿಚಾರಣೆಗಾಗಿ ಕಂಟ್ರೋಲ್ ರೂಂ ಸ್ಥಾಪನೆ

Update: 2020-10-13 13:16 GMT

ಬೆಂಗಳೂರು, ಅ.13: ಭಾರತ ಚುನಾವಣಾ ಆಯೋಗವು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದಿಂದ ಕರ್ನಾಟಕ ವಿಧಾನ ಪರಿಷತ್ತಿಗೆ ದ್ವೈವಾರ್ಷಿಕ ಚುನಾವಣೆ ನಡೆಸಲು ವೇಳಾಪಟ್ಟಿಯನ್ನು ನಿಗದಿಪಡಿಸಿದ್ದು, ಚುನಾವಣಾ ಪ್ರಕ್ರಿಯೆಯು ಅ.1ರಿಂದ ನ.5ರವರೆಗೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದ ಸದಾಚಾರ ನೀತಿ ಸಂಹಿತೆಯು ಸೆ.29ರಿಂದಲೇ ಜಾರಿಯಲ್ಲಿದೆ.

ಚುನಾವಣೆಗೆ ಸಂಬಂಧಿಸಿದ ದೂರು, ಮೇಲ್ವಿಚಾರಣೆಗಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಕಂಟ್ರೋಲ್ ರೂಂ ಅನ್ನು ಸ್ಥಾಪಿಸಲಾಗಿದ್ದು, ಮತದಾನವು ಅ.28ರ ಬುಧವಾರದಂದು ನಡೆಯಲಿದೆ.

ಪ್ರಾದೇಶಿಕ ಆಯುಕ್ತರು, ಬೆಂಗಳೂರುರವರು ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿಯಾಗಿದ್ದು, ನಾಮಪತ್ರ ಸಂಬಂಧಿತ ಪ್ರಕ್ರಿಯೆಗಳು ಅವರ ಕಚೇರಿಯಲ್ಲಿ ನಡೆಯಲಿದೆ. ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣಾ ಸಂಬಂಧಿತ ವಿವಿಧ ದೂರುಗಳಿಗೆ, ಮೇಲ್ವಿಚಾರಣೆ ಹಾಗೂ ನಿವಾರಣೆ ಸಲುವಾಗಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ.

ಆಗ್ನೇಯ ಪದವೀಧರರ ಕ್ಷೇತ್ರ ಚುನಾವಣಾ ವ್ಯಾಪ್ತಿಗೆ ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ಕೋಲಾರ ಹಾಗೂ ತುಮಕೂರು ಜಿಲ್ಲೆಗಳು ಬರಲಿದ್ದು, ಈ ಚುನಾವಣಾ ಸಂಬಂಧಿತ ವಿವಿಧ ದೂರುಗಳಿಗೆ ಮೇಲ್ವಿಚಾರಣೆ ಹಾಗೂ ನಿವಾರಣೆಗಾಗಿ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರ ಕಚೇರಿ, ದೂರವಾಣಿ 080-22109680 ಅನ್ನು ಸಂಪರ್ಕಿಸಬಹುದಾಗಿದೆ.

ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಚುನಾವಣಾ ವಿಭಾಗ, ದೂರವಾಣಿ 08194-222176, ಚಳ್ಳಕೆರೆ ತಾಲೂಕು ಕಚೇರಿ, ದೂ.ಸಂ. 08195-250648, ಚಿತ್ರದುರ್ಗ ತಾಲೂಕು ಕಚೇರಿ, ದೂ.ಸಂ. 08194-222416, ಹಿರಿಯೂರು ತಾಲ್ಲೂಕು ಕಚೇರಿ, ದೂ.ಸಂ. 08193-263226, ಹೊಳಲ್ಕೆರೆ ತಾಲೂಕು ಕಚೇರಿ, ದೂ.ಸಂ. 08191-275062, ಹೊಸದುರ್ಗ ತಾಲೂಕು ಕಚೇರಿ, ದೂ.ಸಂ. 08199-230224, ಮೊಳಕಾಲ್ಮೂರು ತಾಲೂಕು ಕಚೇರಿ, ದೂ.ಸಂ.: 08198-229234 ಅನ್ನು ಸಂಪರ್ಕಿಸಬಹುದಾಗಿದೆ.

ದಾವಣಗೆರೆ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿ, ದೂ.ಸಂ. 08192-272953, ದಾವಣಗೆರೆ ತಾಲೂಕು ಕಚೇರಿ, ದೂ.ಸಂ. 08192-235344, ಮಹಾನಗರ ಪಾಲಿಕೆ, ದೂ.ಸಂ. 08192-234444, ಹರಿಹರ ತಾಲೂಕು ಕಚೇರಿ, ದೂ.ಸಂ. 08192-272959, ಜಗಳೂರು ತಾಲೂಕು ಕಚೇರಿ, ದೂ.ಸಂ. 08196-227242 ಅನ್ನು ಸಂಪರ್ಕಿಸಬಹುದಾಗಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಕಂಟ್ರೋಲ್ ರೂಂ, ದೂ.ಸಂ. 08156-277071, ಬಾಗೇಪಲ್ಲಿ ತಾಲೂಕು ಕಚೇರಿ, ದೂ.ಸಂ. 08150-282225, ಚಿಕ್ಕಬಳ್ಳಾಪುರ ತಾಲೂಕು ಕಚೇರಿ, ದೂ.ಸಂ. 08156-272564, ಚಿಂತಾಮಣಿ ತಾಲೂಕು ಕಚೇರಿ, ದೂ.ಸಂ. 08154-252164, ಗೌರಿಬಿದನೂರು ತಾಲೂಕು ಕಚೇರಿ, ಮೊ.ಸಂ. 8867575221, ಗುಡಿಬಂಡೆ ತಾಲೂಕು ಕಚೇರಿ, ದೂ.ಸಂ. 08156-261250, ಶಿಡ್ಲಘಟ್ಟ ತಾಲೂಕು ಕಚೇರಿ, ದೂ.ಸಂ. 08158-256763 ಅನ್ನು ಸಂಪರ್ಕಿಸಬಹುದಾಗಿದೆ.

ಕೋಲಾರ ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಕಂಟ್ರೋಲ್ ರೂಂ, ದೂ.ಸಂ. 08152-243507, ಬಂಗಾರಪೇಟೆ ತಾಲೂಕು ಕಚೇರಿ, ದೂ.ಸಂ. 08153-255263, ಕೆಜಿಎಫ್ ತಾಲೂಕು ಕಚೇರಿ, ದೂ.ಸಂ. 08153-271674, ಕೋಲಾರ ತಾಲೂಕು ಕಚೇರಿ, ದೂ.ಸಂ. 08152-222056, ಮಾಲೂರು ತಾಲೂಕು ಕಚೇರಿ, ದೂ.ಸಂ.  08151-232699, ಮುಳಬಾಗಿಲು ತಾಲ್ಲೂಕು ಕಚೇರಿ, ದೂ.ಸಂ. 08159-242049, ಶ್ರೀನಿವಾಸಪುರ ತಾಲೂಕು ಕಚೇರಿ, ದೂ.ಸಂ. 08157-245060 ಅನ್ನು ಸಂಪರ್ಕಿಸಬಹುದಾಗಿದೆ.

ತುಮಕೂರು ಜಿಲ್ಲೆಯ ಜಿಲ್ಲಾಧಿಕಾರಿಯವರ ಕಚೇರಿಯ ಚುನಾವಣಾ ವಿಭಾಗ, ದೂ.ಸಂ. 0816-2252359/0816-2252361, ಚಿಕ್ಕನಾಯಕನಹಳ್ಳಿ ತಾಲೂಕು ಕಚೇರಿ, ದೂ.ಸಂ. 08133-267242, ಗುಬ್ಬಿ ತಾಲ್ಲೂಕು ಕಚೇರಿ, ದೂ.ಸಂ. 08131-222234, ಕೊರಟಗೆರೆ ತಾಲೂಕು ಕಚೇರಿ, ದೂ.ಸಂ. 08138-232153, ಕುಣಿಗಲ್ ತಾಲ್ಲೂಕು ಕಚೇರಿ, ದೂ.ಸಂ. 08132-220122, ಮಧುಗಿರಿ ತಾಲ್ಲೂಕು ಕಚೇರಿ, ದೂ.ಸಂ. 08137-282324, ಪಾವಗಡ ತಾಲೂಕು ಕಚೇರಿ, ದೂ.ಸಂ. 08136-244242, ಶಿರಾ ತಾಲೂಕು ಕಚೇರಿ, ದೂ.ಸಂ. 08135-275243, ತಿಪಟೂರು ತಾಲೂಕು ಕಚೇರಿ, ದೂ.ಸಂ. 08134-251039, ತುಮಕೂರು ತಾಲೂಕು ಕಚೇರಿ, ದೂ.ಸಂ. 0816-2251364, ತುರುವೆಕೆರೆ ತಾಲ್ಲೂಕು ಕಚೇರಿ, ದೂ.ಸಂ. 08139-287325 ಅನ್ನು ಸಂಪರ್ಕಿಸಿ ದೂರು ದಾಖಲಿಸಬಹುದಾಗಿದೆ ಎಂದು ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣಾಧಿಕಾರಿ ನವೀನ್ ರಾಜ್ ಸಿಂಗ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News