ಡೆನ್ಮಾರ್ಕ್ ಓಪನ್ : ಲಕ್ಷ ಸೇನ್, ಮರಿನ್ 2ನೇ ಸುತ್ತಿಗೆ

Update: 2020-10-13 18:55 GMT

ಒಡೆನ್ಸ್: ಇನ್ನೂರು ದಿನಗಳ ವಿರಾಮದ ನಂತರ ಅಂತರ್‌ರಾಷ್ಟ್ರೀಯ ಮಟ್ಟದಲ್ಲಿ ಬ್ಯಾಡ್ಮಿಂಟನ್ ಮತ್ತೆ ಆರಂಭವಾಗಿದೆ. ಭಾರತದ ಲಕ್ಷ ಸೇನ್ ಗೆಲುವು ಸಾಧಿಸಿದ ಮೊದಲ ಶಟ್ಲರ್.

 ಒಲಿಂಪಿಕ್ ಚಾಂಪಿಯನ್ ಕ್ಯಾರೊಲಿನಾ ಮರಿನ್ ಕೂಡಾ ಮಹಿಳೆಯರ ಸಿಂಗಲ್ಸ್‌ನಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದ್ದಾರೆ.

  ಮಂಗಳವಾರ ಓಡೆನ್ಸ್‌ನಲ್ಲಿ ನಡೆದ ಡೆನ್ಮಾರ್ಕ್ ಓಪನ್ ಬಿಬ್ಲುಎಫ್ ಸೂಪರ್ -750ರ ಪುರುಷರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ಆಟಗಾರ ಲಕ್ಷ ಸೇನ್ ಅವರು ಫ್ರಾನ್ಸ್‌ನ ಕ್ರಿಸ್ಟೋ ಪೊಪೊವ್‌ರನ್ನು 21-9, 21-15 ಅಂತರದಲ್ಲಿ ಮಣಿಸುವ ಮೂಲಕ ಸ್ಪರ್ಧಾತ್ಮಕ ಬ್ಯಾಡ್ಮಿಂಟನ್‌ನಲ್ಲಿ ಶುಭಾರಂಭ ಮಾಡಿದ್ದಾರೆ.

 19ರ ಹರೆಯದ ಸೇನ್ ಅವರು ಪೊಪೊವ್‌ರನ್ನು ಎದುರಿಸಿರುವ ನಾಲ್ಕು ಪಂದ್ಯಗಳ ಪೈಕಿ ಮೂರನೇ ಜಯ ದಾಖಲಿಸಿದ್ದಾರೆ.

ಡೆನ್ಮಾರ್ಕ್‌ನ ಹ್ಯಾನ್ಸ್ -ಕ್ರಿಸ್ಟಿಯನ್ ಸೋಲ್ಬರ್ಗ್ ವಿಟಿಂಗ್ಹನ್ ಮತ್ತು ಬೆಲ್ಜಿಯಂನ ಮ್ಯಾಕ್ಸಿಮ್ ಮೊರೆಲ್ಸ್ ಇವರ ನಡುವೆ ನಡೆಯಲಿರುವ ಇನ್ನೊಂದು ಪಂದ್ಯದಲ್ಲಿ ವಿಜೇತರನ್ನು ಎರಡನೇ ಸುತ್ತಿನಲ್ಲಿ ಲಕ್ಷ ಸೇನ್ ಎದುರಿಸುವರು.

 ಭಾರತದ ಕೆ.ಶ್ರೀಕಾಂತ್, ಅಜಯ್ ಜಯರಾಮ್ ಮತ್ತು ಸುಭಂಕರ್ ಡೇ ಅವರು ಬುಧವಾರ ತಮ್ಮ ಮೊದಲ ಸುತ್ತಿನ ಪಂದ್ಯಗಳನ್ನು ಆಡಲಿದ್ದಾರೆ.

ಏತನ್ಮಧ್ಯೆ, ಸ್ಪೇನ್‌ನ ಕ್ಯಾರೊಲಿನಾ ಮರಿನ್ ಮಹಿಳೆಯರ ಸಿಂಗಲ್ಸ್‌ನ ಮೊದಲ ಸುತ್ತಿನ ಪಂದ್ಯದಲ್ಲಿ ರಶ್ಯದ ನಥಾಲಿಯಾ ಪೆರ್ಮಿನೋವಾ 21-7, 21-15 ಅಂತರದಲ್ಲಿ ಸೋಲಿಸಿ ಎರಡನೇ ಸುತ್ತು ಪ್ರವೇಶಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News