ಟ್ರಂಪ್ ಪುತ್ರನಿಗೂ ಕೊರೋನ ಸೋಂಕು

Update: 2020-10-15 04:53 GMT

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹದಿಹರೆಯದ ಪುತ್ರ ಬರ್ರನ್ ಅವರಿಗೂ ಕೊರೋನ ವೈರಸ್ ಸೋಂಕು ತಗುಲಿದ್ದನ್ನು ಅಮೆರಿಕದ ಪ್ರಥಮ ಮಹಿಳೆ ಮೆಲೇನಿಯಾ ಟ್ರಂಪ್ ಬುಧವಾರ ಬಹಿರಂಗಪಡಿಸಿದ್ದಾರೆ.

ಮರು ಆಯ್ಕೆಯ ಪ್ರಯತ್ನದಲ್ಲಿರುವ ರಿಪಬ್ಲಿಕನ್ ಅಧ್ಯಕ್ಷ ಹೇಗೆ ಕೊರೋನ ವೈರಸ್ ಸಾಂಕ್ರಾಮಿಕದಿಂದ ತಮ್ಮ ಗಮನವನ್ನು ಬೇರೆ ವಿಷಯಗಳಿಗೆ ಹರಿಸಲು ಹೇಗೆ ಕಷ್ಟ ಎದುರಿಸುತ್ತಿದ್ದಾರೆ ಎನ್ನುವುದನ್ನು ವಿವರಿಸುವ ವೇಳೆ ಮೆಲೇನಿಯಾ ಈ ಬಗ್ಗೆ ಮಾಹಿತಿ ನೀಡಿದರು.

"ಅಧ್ಯಕ್ಷರಿಗೆ ಮತ್ತು ನನಗೆ ಕೋವಿಡ್-19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಸಹಜವಾಗಿಯೇ ನನ್ನ ಯೋಚನೆ ಮಗನತ್ತ ಹರಿಯಿತು" ಎಂದು ಹೇಳಿದ್ದಾರೆ. ವಾಷಿಂಗ್ಟನ್‌ನಲ್ಲಿ ಖಾಸಗಿ ಶಾಲೆಯಲ್ಲಿ ಓದುತ್ತಿರುವ 14 ವರ್ಷ ವಯಸ್ಸಿನ ಬರ್ರನ್‌ಗೆ ಯಾವುದೇ ರೋಗ ಲಕ್ಷಣ ಕಾಣಿಸಿಕೊಂಡಿರಲಿಲ್ಲ. ಆ ಬಳಿಕ ಪರೀಕ್ಷೆಯಲ್ಲಿ ನೆಗೆಟಿವ್ ಬಂದಿದೆ ಎಂದು ಹೇಳಿದ್ದಾರೆ.

ಎದುರಾಳಿ ಡೆಮಾಕ್ರಟಿಕ್ ಪಕ್ಷದ ಜೋ ಬೈಡನ್ ವಿರುದ್ಧದ ಮತಸಮರಕ್ಕೆ ಕೇವಲ 20 ದಿನಗಳು ಬಾಕಿ ಉಳಿದಿರುವ ಹಿನ್ನೆಲೆಯಲ್ಲಿ, ತಮ್ಮ ರ್ಯಾಲಿಗಳಲ್ಲಿ ಮತದಾರರ ಗಮನವನ್ನು ಸಾಂಕ್ರಾಮಿಕ ವಿಷಯದಿಂದ ಬೇರೆಡೆಗೆ ಸೆಳೆಯುವ ಹರಸಾಹಸ ನಡೆಸಿದ್ದಾರೆ. ಮೂರು ದಿನಗಳ ಕಾಲ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಟ್ರಂಪ್ ಕಳೆದ ಸೋಮವಾರ ಮತ್ತೆ ಪ್ರಚಾರ ಕಾರ್ಯಕ್ಕೆ ಧುಮುಕಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News