ಅ. 21ರಂದು ಪ್ರವಾಹ ಪೀಡಿತ ಪ್ರದೇಶಗಳ ಸಿಎಂ ಯಡಿಯೂರಪ್ಪ ವೈಮಾನಿಕ ಸಮೀಕ್ಷೆ

Update: 2020-10-18 08:05 GMT

ಕಲಬುರಗಿ : ಜಿಲ್ಲಾದ್ಯಂತ ಭಾರೀ ಮಳೆಯಿಂದ ಕಲ್ಯಾಣ ಕರ್ನಾಟಕ ಬಹುತೇಕ ಗ್ರಾಮಗಳು ಪ್ರವಾಹದಿಂದ ತತರಿಸುತ್ತಿವೆ. ವಾಯುಭಾರ ಕುಸಿತ ಮತ್ತು ಮಹಾರಾಷ್ಟ್ರದಿಂದ ಹೆಚ್ಚಿನ ಪ್ರಮಾಣದಲ್ಲಿ ಭೀಮಾ ನದಿಗೆ ನೀರು ಬಿಟ್ಟಿರುವ ಕಾರಣ ಕಲ್ಯಾಣ ಕರ್ನಾಟಕ ಭಾಗದಲ್ಲಿ ಪ್ರವಾಹ ಉಂಟಾಗಿದ್ದು, ವಾಸ್ತವ ಸ್ಥಿತಿ ಅರಿಯಲು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಅ. 21 ರಂದು ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ.

ಇದುವರೆಗೆ ಭೀಮಾ‌ ನದಿ ಪ್ರವಾಹದಿಂದ ನಡುಗಡ್ಡೆಯಾದ ಅಫಲಪೂರ ತಾಲ್ಲೂಕಿನ ಉಡಚಣ ಗ್ರಾಮದಲ್ಲಿ  ಶನಿವಾರ 225 ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ತಿಳಿಸಿದ್ದಾರೆ.

ಇಂದು ಭೀಮಾ‌ ನದಿ ಪ್ರವಾಹದಿಂದ ನಡುಗಡ್ಡೆಯಾದ ಅಫ್ಝಲಪುರ ತಾಲ್ಲೂಕಿನ ಉಡಚಣ ಗ್ರಾಮದಲ್ಲಿ  ಅಗ್ನಿಶಾಮಕ ಪೊಲೀಸ್ ತಂಡ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ.

ನಿನ್ನೆ ರಾತ್ರಿ ಭೀಮಾ ಪ್ರವಾಹದಿಂದ ಸಂಕಷ್ಟದಲ್ಲಿರುವ ಕಲಬುರಗಿ ಜಿಲ್ಲೆಯ ಜನತೆಯ ಸಂರಕ್ಷಣೆಗಾಗಿ ಸಿಕಿಂದರ್ ಬಾದ್ ನಿಂದ ಮೇಜರ್ ಮಾರ್ಟಿನ್ ಅರವಿಂದ ಅವರ ನೇತೃತ್ಬದ ಕಂಪನಿಯಲ್ಲಿ ಒಟ್ಟು 98 ಜನ ಯೋಧರ ಸೇನಾ ಪಡೆಯನ್ನು ಬರಮಾಡಿಕೊಳಲಾಗಿದೆ. ಸೇನಾ ಮೂರು ತಂಡವಾಗಿ ಅಫ್ಝಲಪುರ, ಜೇವರ್ಗಿ ಹಾಗೂ ಶಹಾಬಾದ ತಾಲೂಕಿನಲ್ಲಿ ಜನರ ರಕ್ಷಣಾ ಕಾರ್ಯಾಚರಣೆಗೆ ನಡೆಸಲಿದ್ದು, ನಿನ್ನೆ ರಾತ್ರಿಯಿಂದಲೇ  ಸೇನಾ ಪಡೆ ರಕ್ಷಣಾ‌ ಕಾರ್ಯದಲ್ಲಿ ನಿರತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News