ಏಳನೇ ದಿನಕ್ಕೆ ಕಾಲಿಟ್ಟ ಪಿಯು ಉಪನ್ಯಾಸಕರ ಪ್ರತಿಭಟನೆ

Update: 2020-10-18 15:50 GMT

ಬೆಂಗಳೂರು, ಅ. 18: ಪಿಯು ಉಪನ್ಯಾಸಕರ ನೇಮಕಾತಿ ಆದೇಶ ಪತ್ರ ನೀಡುವಂತೆ ಕಳೆದ 6 ದಿನಗಳಿಂದ ನಡೆಸುತ್ತಿರುವ ಅಹೋರಾತ್ರಿ ಧರಣಿ ರವಿವಾರ 7ನೇ ದಿನಕ್ಕೆ ಕಾಲಿಟ್ಟಿದ್ದು, ಆದೇಶ ಪತ್ರ ನೀಡುವಂತೆ ಪಟ್ಟು ಹಿಡಿದು ಕುಳಿತಿದ್ದಾರೆ.

'ಆರು ವರ್ಷಗಳು, ಆರು ಸಚಿವರು, ಏಳು ದಿನಗಳ ಅಹೋರಾತ್ರಿ ಧರಣಿ, ಸರಕಾರದ 108 ಭರವಸೆಗಳ ಮಧ್ಯೆ ನಮಗೆ ಆದೇಶ ಪ್ರತಿಗಳು ಸಿಗುವುದು' ಎಂದು ಪ್ರತಿಭಟನಕಾರರು ಭಿತ್ತಿ ಪತ್ರಗಳನ್ನು ಪ್ರದರ್ಶಿಸಿದರು.

ಈಗಾಗಲೇ ಉಪನ್ಯಾಸಕರ ಪರವಾಗಿ ಸರಕಾರಕ್ಕೆ ಮನವಿ ಪತ್ರಗಳು ಎಲ್ಲವನ್ನೂ ಸಲ್ಲಿಸಲಾಗಿದ್ದು, ಸರಕಾರವೂ ನೇಮಕಾತಿ ಪತ್ರ ಕೊಡುವ ಭರವಸೆ ನೀಡಿದೆ. ಆದರೆ ಭರವಸೆಯ ಮಾತುಗಳು ಬೇಡ, ತಕ್ಷಣವೇ ನೇಮಕಾತಿ ಪತ್ರ ನೀಡಿ ಆ ಬಳಿಕ ಧರಣಿ ಕೈ ಬಿಡಲಾಗುವುದು ಎಂದು ಉಪನ್ಯಾಸಕರು ಹೇಳಿದರು.

ಈ ವೇಳೆ ಹೋರಾಟಗಾರ ವಾಟಾಳ್ ನಾಗರಾಜ್ ಮಾತನಾಡಿ, ಪ್ರತಿಭಟನೆ ಮಾಡುತ್ತಿರುವವರಲ್ಲಿ ಬಹುತೇಕ ಅಭ್ಯರ್ಥಿಗಳು ಕೌನ್ಸಲಿಂಗ್‍ನಲ್ಲಿ ಹಳ್ಳಿಗಳಿಗೆ ನಿಯೋಜಿಸಲ್ಪಟ್ಟಿದ್ದಾರೆ. ಇದರಿಂದಾಗಿ ಕುಗ್ರಾಮದ ವಿದ್ಯಾರ್ಥಿಗಳು ಇಂಟರ್ನೆಟ್ ಸೌಲಭ್ಯವೂ ಇಲ್ಲದೇ, ಇದೀಗ ಉಪನ್ಯಾಸಕರು ಇಲ್ಲದೆ ಪಾಠಗಳಿಂದ ವಂಚಿತರಾಗುತ್ತಿದ್ದಾರೆ.

ಪ್ರತಿಭಟನಾ ನಿರತ ಉಪನ್ಯಾಕರು ಧರಣಿ ಕೈ ಬಿಟ್ಟರೆ ಮುಂದೆ ಚುನಾವಣೆ ಇರುವುದರಿಂದ ಮತ್ತೆ ಒಂದು ವರ್ಷ ವಿಳಂಬವಾಗುವ ಆತಂಕ ಇವರಲ್ಲಿದೆ. ಹೀಗಾಗಿ, ಏನಾದರೂ ಸರಿ ಸರಕಾರ ಪತ್ರ ನೀಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News