ಡಿಕೆಎಸ್‌ಸಿ ರಿಯಾದ್ ಝೋನಲ್ ಸಮಿತಿಗೆ ಪದಾಧಿಕಾರಿಗಳ ಆಯ್ಕೆ

Update: 2020-10-19 05:08 GMT

ರಿಯಾದ್ ಅ.19: ಕುಂಬೋಲ್ ಸೈಯದ್ ಕೆ.ಎಸ್.ಆಟಕೋಯ ತಂಙಳ್ ಅಧ್ಯಕ್ಷತೆಯಲ್ಲಿ ಕಾರ್ಯಾಚರಿಸುತ್ತಿರುವ ದಕ್ಷಿಣ ಕರ್ನಾಟಕ ಸುನ್ನೀ ಸೆಂಟರ್(ಡಿಕೆಎಸ್‌ಸಿ), ಮಂಗಳೂರು ಕೇಂದ್ರ ಸಮಿತಿಯ ಅಧೀನದಲ್ಲಿ ಪ್ರವರ್ತಿಸುತ್ತಿರುವ ಡಿಕೆಎಸ್‌ಸಿ ರಿಯಾದ್ ಝೋನಲ್ ಸಮಿತಿಯ ವಾರ್ಷಿಕ ಮಹಾಸಭೆ ಅ.16ರಂದು ಇಲ್ಲಿನ ಬತ್ತಾ ಎಂಬಲ್ಲಿ ನಡೆಯಿತು.

ಸಮಿತಿಯ ಅಧ್ಯಕ್ಷ ಅಬ್ದುಲ್ ಅಝೀಝ್ ಬಜ್ಪೆ ಅಧ್ಯಕ್ಷತೆಯಲ್ಲಿ ನಡೆದ ಸಭೆಯನ್ನು ರಿಯಾದ್ ಝೋನ್ ದಾಯಿ ಮುಸ್ತಫ ಸಅದಿ ದುಆ ಮೂಲಕ ಉದ್ಘಾಟಿಸಿದರು.

ಅಲ್-ಖರ್ಜ್ ಘಟಕದ ಮುಖಂಡ ಅಬ್ದುಲ್ ಹಮೀದ್ ಮುಸ್ಲಿಯಾರ್ ಕಿರಾಅತ್ ಪಠಿಸಿದರು.

ರಿಯಾದ್ ಝೋನ್ ಪ್ರಧಾನ ಕಾರ್ಯದರ್ಶಿ ದಾವೂದ್ ಕಜೆಮಾರ್, ಜುಬೈಲ್‌ನಿಂದ ಆಗಮಿಸಿದ ಕೇಂದ್ರ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕೇಂದ್ರ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮೆಕ್ಸ್ ಮಾತನಾಡಿ, ಡಿಕೆಎಸ್‌ಸಿಯ ಕಾರ್ಯಚಟುವಟಿಕೆಗಳ ಬಗ್ಗೆ ವಿವರಿಸಿದರು.

ಝೋನಲ್ ಪ್ರಧಾನ ಕಾರ್ಯದರ್ಶಿ ದಾವೂದ್ ಕಜೆಮಾರ್ ಗತ ವರ್ಷದ ಲೆಕ್ಕಪತ್ರ ಮಂಡಿಸಿದರೆ, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಉಚ್ಚಿಲ ಗತ ವರ್ಷದ ವರದಿ ವಾಚಿಸಿದರು. ಡಿಕೆಎಸ್‌ಸಿ ತುಖ್ಬಾ ಘಟಕದ ಅಧ್ಯಕ್ಷ ಅಬ್ದುಲ್ ಅಝೀಝ್ ಮೂಳೂರು ಉಪಸ್ಥಿತರಿದ್ದರು.

ಕೇಂದ್ರ ಸಮಿತಿಯ ಉಪಾಧ್ಯಕ್ಷ, ರಿಯಾದ್ ರೆನ್ ಉಸ್ತುವಾರಿ ಕೆ.ಎಚ್. ರಫೀಕ್ ಸೂರಿಂಜೆ ನೇತೃತ್ವದಲ್ಲಿ ನೂತನ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ನೂತನ ಸಾಲಿನ ಅಧ್ಯಕ್ಷರಾಗಿ ಇಸ್ಮಾಯೀಲ್ ಕನ್ನಂಗಾರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುರ್ರಹ್ಮಾನ್ ಉಚ್ಚಿಲ, ಕೋಶಾಧಿಕಾರಿಯಾಗಿ ಅಬ್ದುಲ್ ಖಾದರ್ ಕನ್ನಂಗಾರ್, ಉಪಾಧ್ಯಕ್ಷರುಗಳಾಗಿ ಅಬ್ದುಲ್ ಅಝೀಝ್ ಕಾಟಿಪಳ್ಳ, ಅಬ್ದುಲ್ ಹಮೀದ್ ಮುಸ್ಲಿಯಾರ್, ಕಾರ್ಯದರ್ಶಿಗಳಾಗಿ ನವಾಝ್ ಚಿಕ್ಕಮಗಳೂರು, ಎನ್.ಎಸ್. ಹನೀಫ್ ಸುಟ್ಟ, ಲೆಕ್ಕಪರಿಶೋಧಕರಾಗಿ ನಿಝಾಮ್ ಸಾಗರ, ಸಂಚಾಲಕರಾಗಿ ಹನೀಫ್ ಪಾವೂರು, ಇರ್ಷಾದ್ ಸಚ್ಚೇರಿಪೇಟೆ, ಇಬ್ರಾಹೀಂ ಬಜ್ಪೆ, ಶರೀಫ್ ತೋಕೂರು, ಸಲಹೆಗಾರರಾಗಿ ಹಮೀದ್ ಸುಳ್ಯ, ನಝೀರ್ ಕಾಶಿಪಟ್ಣ, ಮುಹಮ್ಮದ್ ಸಿತಾರ್, ಅಬೂಬಕರ್ ಪಡುಬಿದ್ರೆ, ಅಝೀಝ್ ಬಜ್ಪೆ, ದಾವೂದ್ ಕಜೆಮಾರ್ ಆಯ್ಕೆಯಾದರು.

 ರಿಯಾದ್ ಸಿಲ್ವರ್ ಜುಬಿಲಿ ಸಮಿತಿಯನ್ನೂ ಈ ವೇಳೆ ರಚಿಸಲಾಯಿತು. ಅಧ್ಯಕ್ಷರಾಗಿ ದಾವೂದ್ ಕಜೆಮಾರ್, ಕಾರ್ಯದರ್ಶಿಯಾಗಿ ಅಬ್ದುಲ್ ಅಝೀಝ್ ಬಜ್ಪೆ, ಕೋಶಾಧಿಕಾರಿಯಾಗಿ ಅಬ್ದುಲ್ ಅಝೀಝ್ ಕಾಟಿಪಳ್ಳ ಆಯ್ಕೆಯಾದರು.

ಇದೇವೇಳೆ ಇತ್ತೀಚೆಗೆ ನಿಧನರಾದ ಖಾಝಿ ಬೇಕಲ್ ಉಸ್ತಾದ್ ಅನುಸ್ಮರಣೆ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News