ಡ್ವೇಯ್ನ್ ಬ್ರಾವೊಗೆ ಗಾಯದ ಸಮಸ್ಯೆ

Update: 2020-10-19 05:24 GMT

ದುಬೈ, ಅ.18: ಡೆಲ್ಲಿ ವಿರುದ್ಧದ ಪಂದ್ಯದ ಕೊನೆಯ ಓವರ್‌ನಲ್ಲಿ ಚೆನ್ನೈ ತಂಡದ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಬೌಲಿಂಗ್‌ಗೆ ಇಳಿದಾಗ ಈ ಹೆಜ್ಜೆಯ ಬಗ್ಗೆ ಸಾಕಷ್ಟು ಪ್ರಶ್ನೆ ಸುತ್ತುವರಿದಿದ್ದವು. ಡ್ವೇಯ್ನೆ ಬ್ರಾವೊ ಬದಲಿಗೆ ಜಡೇಜ ಬೌಲಿಂಗ್ ಮಾಡಿದ್ದಕ್ಕೆ ಟ್ವಿಟರ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆದಿತ್ತು. ಜಡೇಜ 5 ಎಸೆತಗಳಲ್ಲಿ 22 ರನ್ ನೀಡಿ ದುಬಾರಿಯಾಗಿದ್ದರು. ಪಂದ್ಯ ಚೆನ್ನೈ ಕೈತಪ್ಪಿಹೋಗಿತ್ತು.

ಡೆತ್ ಓವರ್ ಸ್ಪೆಷಲಿಸ್ಟ್ ಬ್ರಾವೊಗೆ ಕೊನೆಯ ಓವರ್ ಬೌಲಿಂಗ್ ಮಾಡಲು ಅವಕಾಶ ನೀಡದ ಹಿಂದಿನ ಕಾರಣ ಇದೀಗ ಬಯಲಾಗಿದೆ. ಬ್ರಾವೊ ತೊಡೆಸಂದು ಗಾಯದ ಸಮಸ್ಯೆಯಿಂದ ಬಳಲುತ್ತಿದ್ದು, 2 ವಾರಗಳಿಗೂ ಅಧಿಕ ಸಮಯ ಅವರು ಸಕ್ರಿಯ ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ ಎಂದು ಚೆನ್ನೈ ಕೋಚ್ ಸ್ಟೀಫನ್ ಫ್ಲೆಮಿಂಗ್ ತಿಳಿಸಿದ್ದಾರೆ.

  ‘‘ಬ್ರಾವೊ ತೊಡೆಸಂದು ನೋವಿನಿಂದ ಬಳಲುತ್ತಿದ್ದು, ಸಹಜವಾಗಿಯೇ ಅವರು ಕ್ರಿಕೆಟ್‌ನಿಂದ ದೂರ ಉಳಿಯಲಿದ್ದಾರೆ. ಡೆಲ್ಲಿ ವಿರುದ್ಧ ಕೊನೆಯ ಓವರ್ ಬೌಲಿಂಗ್ ಮಾಡಲು ಅವರಿಂದ ಸಾಧ್ಯವಾಗಿರಲಿಲ್ಲ. ಈ ಹಂತದಲ್ಲಿ ಅವರು ಇನ್ನು ಕೆಲವು ವಾರಗಳ ಕಾಲ ಕ್ರಿಕೆಟ್‌ನಿಂದ ದೂರ ಉಳಿಯಬಹುದು ಎಂದು ನಾವು ಅಂದಾಜಿಸಿದ್ದೇವೆವ’’ ಎಂದು ಫ್ಲೆಮಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News