ಶಮಿ ಸೂಪರ್ ಓವರ್‌ನಲ್ಲಿ ಆರು ಯಾರ್ಕರ್‌ ಎಸೆಯಲು ಬಯಸಿದ್ದರು: ರಾಹುಲ್

Update: 2020-10-19 08:22 GMT

ದುಬೈ: ಮುಂಬೈ ಇಂಡಿಯನ್ಸ್ ವಿರುದ್ಧ ರವಿವಾರ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲ ಸೂಪರ್ ಓವರ್‌ನಲ್ಲಿ ಕೇವಲ 5 ರನ್ ಉಳಿಸಿಕೊಳ್ಳಲು ತಂಡದ ವೇಗದ ಬೌಲರ್ ಮುಹಮ್ಮದ್ ಶಮಿ ಆರು ಯಾರ್ಕರ್‌ಗಳನ್ನು ‌ ಎಸೆಯಲು ಬಯಸಿದ್ದರು ಎಂದು ಪಂಜಾಬ್ ತಂಡದ ನಾಯಕ ಕೆ.ಎಲ್.ರಾಹುಲ್ ಹೇಳಿದ್ದಾರೆ.

 ಐಪಿಎಲ್ ಪಂದ್ಯ ನಿಗದಿತ 20 ಓವರ್‌ಗಳಲ್ಲಿ ಸಮಬಲಗೊಂಡಿತ್ತು. ಮೊದಲ ಸೂಪರ್ ಓವರ್‌ನಲ್ಲಿ ಪಂಜಾಬ್ ಕೇವಲ 5 ರನ್ ಗಳಿಸಿತ್ತು. ಶಿಸ್ತುಬದ್ಧ ಬೌಲಿಂಗ್ ಸಂಘಟಿಸಿದ್ದ ಶಮಿ ಗೆಲ್ಲಲು 6 ರನ್ ಗುರಿ ಪಡೆದಿದ್ದ ಎದುರಾಳಿ ಮುಂಬೈ ತಂಡವನ್ನು 5 ರನ್‌ಗೆ ನಿಯಂತ್ರಿಸಿ ಪಂದ್ಯವು ಮತ್ತೆ ಟೈ ಆಗಲು ಕಾರಣರಾದರು. ಅಂತಿಮವಾಗಿ ಪಂಜಾಬ್ ತಂಡ ಎರಡನೇ ಸೂಪರ್ ಓವರ್‌ನಲ್ಲಿ ಗೆಲುವು ಸಾಧಿಸಲು ಸಮರ್ಥವಾಯಿತು.

 "ನೀವು ಎಂದಿಗೂ ಸೂಪರ್ ಓವರ್‌ಗಾಗಿ ತಯಾರಿ ನಡೆಸಲು ಸಾಧ್ಯವಿಲ್ಲ. ಯಾವುದೇ ತಂಡ ಕೂಡ ತಯಾರಿ ಮಾಡುವುದಿಲ್ಲ. ಈ ಸಂದರ್ಭದಲ್ಲಿ ನಮ್ಮ ಬೌಲರ್‌ಗಳ ಮೇಲೆ ನಂಬಿಕೆ ಇಡಬೇಕು. ಅವರು ಸೂಪರ್ ಓವರ್‌ನಲ್ಲಿ 6 ಯಾರ್ಕರ್‌ಗಳನ್ನು ಎಸೆಯಲು ಬಯಸಿದ್ದರು. ಆ ನಿಟ್ಟಿನಲ್ಲಿ ಅವರು ಸ್ಪಷ್ಟವಾಗಿದ್ದರು. ಹಿರಿಯ ಆಟಗಾರರು ತಂಡಕ್ಕಾಗಿ ಪಂದ್ಯಗಳನ್ನು ಗೆಲ್ಲುವುದು ಅತ್ಯಂತ ಮುಖ್ಯವಾಗುತ್ತದೆ'' ಎಂದು 77 ರನ್ ಗಳಿಸಿದ್ದಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ರಾಹುಲ್ ಅಭಿಪ್ರಾಯಪಟ್ಟರು.

.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News