ಪಾಕಿಸ್ತಾನ ದೂತವಾಸದ ಬಳಿ ಕಾಲ್ತುಳಿತ, ಅಫ್ಘಾನಿಸ್ತಾನದ 11 ಮಹಿಳೆಯರು ಮೃತ

Update: 2020-10-21 08:27 GMT

ಕಾಬೂಲ್:ಪೂರ್ವ ಅಫ್ಘಾನಿಸ್ತಾನದ ಕ್ರೀಡಾಂಗಣವೊಂದರಲ್ಲಿ ಬುಧವಾರ ನಡೆದ ಕಾಲ್ತುಳಿತ ದುರಂತದಲ್ಲಿ 11 ಮಹಿಳೆಯರು ಸಾವನ್ನಪ್ಪಿದ್ದಾರೆ.

ಪಾಕಿಸ್ತಾನದ ದೂತವಾಸದಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಲು ಸಾವಿರಾರು ಜನರು ನಂಗರ್ಹರ್ ಪ್ರಾಂತ್ಯದ ರಾಜಧಾನಿ ಜಲಾಲಬಾದ್ ನಗರದ ಕ್ರೀಡಾಂಗಣದಲ್ಲಿ ಸೇರಿದ್ದರು. ಜನರು ಕ್ರೀಡಾಂಗಣದಿಂದ ನಿರ್ಗಮಿಸಲು ಯತ್ನಿಸುತ್ತಿದ್ದಾಗ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ 10 ಮಂದಿ ಗಾಯಗೊಂಡಿದ್ದಾರೆ  ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ದೂತವಾಸವು ಏಳು ತಿಂಗಳ ವಿರಾಮದ ಬಳಿಕ ಕಳೆದ ವಾರ ಮತ್ತೆ ವೀಸಾ ನೀಡುವುದನ್ನು ಆರಂಭಿಸಿತ್ತು.

ವೀಸಾ ಕೇಂದ್ರದಲ್ಲಿ ಹೆಚ್ಚಿನ ಜನಸಂದಣಿ ಸೇರುವುದನ್ನು ತಪ್ಪಿಸಲು ಅರ್ಜಿದಾರರನ್ನು ಜಲಾಲಬಾದ್ ಹತ್ತಿರದ ಫುಟ್ಬಾಲ್  ಕ್ರೀಡಾಂಗಣದಲ್ಲಿ  ಸೇರುವಂತೆ ಸೂಚಿಸಲಾಗಿತ್ತು. ವೈದ್ಯಕೀಯ ವೀಸಾ ಹಾಗೂ ಸಂಬಂಧಿಕರನ್ನು ಭೇಟಿಯಾಗಲು ನಂಗರ್ಹರ್ ಹಾಗೂ ಹತ್ತಿರದ  ಪ್ರಾಂತ್ಯದ ಜನರು ಮುಂಜಾನೆಯಿಂದಲೇ ಆಗಮಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News