ಐಪಿಎಲ್ ನಿಂದ ಡ್ವೇಯ್ನ್ ಬ್ರಾವೊ ಔಟ್

Update: 2020-10-21 09:20 GMT

ದುಬೈ: ಗಾಯದ ಸಮಸ್ಯೆಯ  ಕಾರಣಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್ ರೌಂಡರ್ ಡ್ವೆಯ್ನ್ ಬ್ರಾವೊ ಈಗ ನಡೆಯುತ್ತಿರುವ 13ನೇ ಆವೃತ್ತಿ ಐಪಿಎಲ್ ಟ್ವೆಂಟಿ-20 ಟೂರ್ನಿಯ ಉಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.  ಪ್ಲೇ-ಆಫ್ ಹಂತಕ್ಕೇರುವ ಅಲ್ಪ ಅವಕಾಶ ಹೊಂದಿರುವ ಚೆನ್ನೈ ತಂಡಕ್ಕೆ ಈ ಬೆಳವಣಿಗೆಯು ತೀವ್ರ ಹಿನ್ನಡೆಯಾಗಿದೆ.

37ರ ಹರೆಯದ ಬ್ರಾವೋ ಕಳೆದ ಕೆಲವು ವರ್ಷಗಳಿಂದ ಚೆನ್ನೈ ತಂಡದ ಅವಿಭಾಜ್ಯ ಅಂಗವಾಗಿದ್ದು,

ಅ.17ರಂದು ಶಾರ್ಜಾದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ನಲ್ಲಿ ಗಾಯದ ಸಮಸ್ಯೆಯ ಕಾರಣಕ್ಕೆ ಬ್ರಾವೋ ಬೌಲಿಂಗ್ ಮಾಡಿರಲಿಲ್ಲ. ಬ್ರಾವೊ ಬದಲಿಗೆ ಬೌಲಿಂಗ್ ಮಾಡಿದ್ದ ರವೀಂದ್ರ ಜಡೇಜ 3 ಸಿಕ್ಸರ್ ಸಹಿತ 20ಕ್ಕೂ ಅಧಿಕ ರನ್ ನೀಡಿ ದುಬಾರಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News