ಮೂರು ವರ್ಷಗಳಿಂದ ನಾಪತ್ತೆಯಾಗಿದ್ದ ಗೂರ್ಖಾ ನಾಯಕ ಬಿಮಲ್ ಗುರುಂಗ್ ಕೋಲ್ಕತಾದಲ್ಲಿ ಇಂದು ಪ್ರತ್ಯಕ್ಷ

Update: 2020-10-21 13:58 GMT

ಹೊಸದಿಲ್ಲಿ: ಬಂಗಾಳದ ಡಾರ್ಜಿಲಿಂಗ್ ಪ್ರದೇಶದಲ್ಲಿ ಗೂರ್ಖಾಗಳ ರಾಜ್ಯಸ್ವ ಚಳವಳಿಯ ನಾಯಕ ಹಾಗೂ ಕಳೆದ ಮೂರು ವರ್ಷಗಳಿಂದ ಪೊಲೀಸರಿಗೆ ಬೇಕಾಗಿದ್ದ ಬಿಮಲ್ ಗುರುಂಗ್ ಇಂದು ಕೋಲ್ಕತಾದಲ್ಲಿ ಕಾಣಿಸಿಕೊಂಡರು.ಮಾಧ್ಯಮಗಳನ್ನು ಭೇಟಿಯಾದರು.

ನಾನು ಅಪರಾಧಿಯಲ್ಲ. ನಾನು ರಾಷ್ಟ್ರ ವಿರೋಧಿಯೂ ಅಲ್ಲ. ನಾನು ರಾಜಕೀಯ ನಾಯಕ. ನಮ್ಮ ರಾಜಕೀಯ ಬೇಡಿಕೆಗೆ ರಾಜಕೀಯ ಇತ್ಯರ್ಥ ಬೇಕು ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಗೂರ್ಖಾಲ್ಯಾಂಡ್ ಚಳವಳಿಯ ನೇತೃತ್ವವಹಿಸುವ ಸಂಘಟನೆಯಾಧ ಗೂರ್ಖಾ ಜನಮುಕ್ತಿ ಮೋರ್ಚಾದ ಮುಖ್ಯಸ್ಥ ಬಿಮಲ್ ಗುರುಂಗ್ ಬೆಂಬಲಿಗರೊಂದಿಗೆ ನಡೆದಿದ್ದ ಘರ್ಷಣೆಯಲ್ಲಿ ಪೊಲೀಸ್ ಸಾವನ್ನಪ್ಪಿದ ಬಳಿಕ 2017ರ ಸೆಪ್ಟಂಬರ್ ಬಳಿಕ ಗುರುಂಗ್ ಭೂಗತನಾಗಿದ್ದರು. ಯುಎಪಿಎ ಕಠಿಣ ಭಯೋತ್ಪಾದನ ವಿರೋಧಿ ಕಾನೂನಿನಡಿಯಲ್ಲಿ ಗುರುಂಗ್ ಮೇಲೆ ಆರೋಪ ಹೊರಿಸಲಾಗಿದ್ದು, ಬಂಗಾಳ ಪೊಲೀಸರು ಅವರಿಗೆ ಲುಕೌಟ್ ನೋಟಿಸ್ ನೀಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News