ಕ್ವಾರಂಟೈನ್‌ನಲ್ಲಿ ತರಬೇತಿ ಪಡೆಯಲು ಟೀಮ್ ಇಂಡಿಯಾಕ್ಕೆ ನ್ಯೂ ಸೌತ್ ವೇಲ್ಸ್ ಸರಕಾರದಿಂದ ಅನುಮತಿ

Update: 2020-10-22 18:33 GMT

ಸಿಡ್ನಿ: ನ್ಯೂ ಸೌತ್ ವೇಲ್ಸ್ ಸರಕಾರವು ಆಸ್ಟ್ರೇಲಿಯ ಪ್ರವಾಸ ಕೈಗೊಳ್ಳಲಿರುವ ಟೀಮ್ ಇಂಡಿಯಾಕ್ಕೆ ಕ್ವಾರಂಟೈನ್‌ನಲ್ಲಿ ತರಬೇತಿ ಪಡೆಯಲು ಅನುಮತಿ ನೀಡಿದೆ.

ಸರಕಾರದ ಅನುಮತಿಯ ಬಳಿಕ ಸಿಡ್ನಿ ಮತ್ತು ಕ್ಯಾನ್‌ಬೆರಾದಲ್ಲಿ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ಸೀಮಿತ ಓವರ್‌ಗಳ ಸರಣಿ ಆಯೋಜಿಸಲು ಸಿದ್ಧತೆಆರಂಭಗೊಂಡಿವೆ.

   ಐಪಿಎಲ್‌ನಿಂದ ಹಿಂದಿರುಗಿದ ಭಾರತದ ಮತ್ತು ಆಸ್ಟ್ರೇಲಿಯದ ಆಟಗಾರರಿಗೆ ಸಿಡ್ನಿಯಲ್ಲಿ ತರಬೇತಿ ನೀಡಲು ಅವಕಾಶ ನೀಡುವ ವಿಚಾರದಲ್ಲಿ ನ್ಯೂ ಸೌತ್ ವೇಲ್ಸ್ ಸರಕಾರ ಮತ್ತು ಕ್ರಿಕೆಟ್ ಆಸ್ಟ್ರೇಲಿಯ ಒಪ್ಪಂದ ಮಾಡಿಕೊಂಡಿವೆ ಎಂದು ವರದಿ ತಿಳಿಸಿದೆ.

  ಭಾರತದ ತಂಡವು ಆರಂಭದಲ್ಲಿ ಬ್ರಿಸ್ಬೇನ್‌ನಲ್ಲಿ ಇಳಿಯಬೇಕಿತ್ತು.ಆದರೆ ಕ್ವೀನ್ಸ್‌ಲ್ಯಾಂಡ್ ರಾಜ್ಯ ಆರೋಗ್ಯ ಅಧಿಕಾರಿಗಳು ತಮ್ಮ 14 ದಿನಗಳ ಕ್ಯಾರಂಟೈನ್ ನಿಯಮವನ್ನು ಸಡಿಲಿಸಲಿಲ್ಲ. ಈ ಅವಧಿಯಲ್ಲಿ ವಿರಾಟ್ ಕೊಹ್ಲಿ ತಂಡಕ್ಕೆ ತರಬೇತಿ ಪಡೆಯಲು ಅವಕಾಶ ನೀಡದ ಕಾರಣ ಸಿಡ್ನಿಯಲ್ಲಿ ಇಳಿಯಲಿದೆ.

ಭಾರತವು ಆಸ್ಟ್ರೇಲಿಯದಲ್ಲಿ ಮೂರು ಟ್ವೆಂಟಿ-20 , ಮೂರು ಏಕದಿನ ಮತ್ತು ನಾಲ್ಕು ಟೆಸ್ಟ್ ಪಂದ್ಯಗಳನ್ನು ಆಡಲಿದೆ.

 ಮೊದಲ ಎರಡು ಏಕದಿನ ಪಂದ್ಯಗಳು ನವೆಂಬರ್ 27 ಮತ್ತು 29ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯಲಿವೆ. ಅಂತಿಮ ಪಂದ್ಯ ಕ್ಯಾನ್‌ಬೆರಾದ ಮನುಕಾ ಓವಲ್‌ನಲ್ಲಿ ನಿಗದಿಯಾಗಿದೆ.

ಮೊದಲ ಟ್ವೆಂಟಿ-20 ಪಂದ್ಯ ಕ್ಯಾನ್‌ಬೆರಾದಲ್ಲಿ, ಎರಡು ಮತ್ತು ಮೂರನೇ ಟ್ವೆಂಟಿ-20 ಪಂದ್ಯ ಸಿಡ್ನಿಯಲ್ಲಿ ನಡೆಯಲಿದೆ.

      ಡಿಸೆಂಬರ್ 17ರಿಂದ 21ರವರೆಗೆ ಅಡಿಲೇಡ್‌ನಲ್ಲಿ ಪಿಂಕ್ ಬಾಲ್‌ನೊಂದಿಗೆ ಡೇ ನೈಟ್ ಟೆಸ್ಟ್ ಆಡಲಾಗುವುದು. ಕೋವಿಡ್-19 ಪರಿಸ್ಥಿತಿಯ ಹಿನ್ನೆಲೆಯಲ್ಲಿ ಮೆಲ್ಬೋರ್ನ್‌ನಲ್ಲಿ ಅಧಿಕಾರಿಗಳು ಟೆಸ್ಟ್‌ನ ಆತಿಥ್ಯ ವಹಿಸಲು ಅನುಮತಿ ನೀಡದಿದ್ದರೆ ಡಿಸೆಂಬರ್ 26ರಿಂದ 31ರ ವರೆಗೆ ಬಾಕ್ಸಿಂಗ್ ಡೇ ಟೆಸ್ಟ್‌ನ್ನು ಅಡಿಲೇಡ್‌ನಲ್ಲಿ ಆಯೋಜಿಸಲಾಗುವುದು.

ಸಿಡ್ನಿಯಲ್ಲಿ ಹೊಸ ವರ್ಷದ ಟೆಸ್ಟ್‌ನ್ನು ಜನವರಿ 7ರಿಂದ 11 ರವರೆಗೆ ಆಡಲಾಗುವುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News