×
Ad

ಆರ್‍ಆರ್ ನಗರ ಉಪಚುನಾವಣೆ: ಹೆಚ್ಚುವರಿ ಪೊಲೀಸರ ನೇಮಕಕ್ಕೆ ಸಿದ್ಧತೆ

Update: 2020-10-23 21:51 IST
ಸಾಂದರ್ಭಿಕ ಚಿತ್ರ

ಬೆಂಗಳೂರು, ಅ.23: ಆರ್‍ಆರ್ ನಗರ ವಿಧಾನಸಭಾ ಕ್ಷೇತ್ರ ಉಪಚುನಾವಣೆ ಹಿನ್ನೆಲೆ ಉತ್ತರ ವಿಭಾಗದಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ಅನ್ನು ನೇಮಕ ಮಾಡಲು ಸಿದ್ಧತೆ ಕೈಗೊಳ್ಳಲಾಗಿದೆ.

ಶುಕ್ರವಾರ ನಗರಾಯುಕ್ತರ ಕಚೇರಿಯಲ್ಲಿ ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೆಂದು ಮುಖರ್ಜಿ ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.

ಈ ಕ್ಷೇತ್ರವನ್ನು ಅತಿಸೂಕ್ಷ್ಮವಾಗಿ ಗುರುತಿಸಿರುವ ಹಿನ್ನೆಲೆ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಈ ನಿರ್ಧಾರಕ್ಕೆ ಮುಂದಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಷ್ಟು ಪೊಲೀಸರು?: ಹೆಚ್ಚುವರಿಯಾಗಿ 10 ಪೊಲೀಸ್ ಇನ್‍ಸ್ಪೆಕ್ಟರ್, 36 ಸಬ್ ಇನ್‍ಸ್ಪೆಕ್ಟರ್, 200 ಹೆಡ್ ಕಾನ್‍ಸ್ಟೇಬಲ್, 4 ಕೆಎಸ್‍ಆರ್‍ಪಿ ತುಕಡಿ 3 ಸಿಆರ್ ನೇಮಕಕ್ಕೆ ಆದೇಶಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಉತ್ತರ ವಿಭಾಗ ಡಿಸಿಪಿ ಧಮೆರ್ಂದ್ರ ಕುಮಾರ್ ಮೀನಾ, ಉಪಚುನಾವಣೆ ಹಿನ್ನೆಲೆ ಹೆಚ್ಚಿನ ಭದ್ರತೆ ಮಾಡಲಾಗಿದೆ. ಎಲ್ಲೆಡೆ ಹೆಚ್ಚು ಸಿಬ್ಬಂದಿ ನಿಯೋಜನೆಯಾಗಿದ್ದು ನಾವು ಎಲ್ಲೆಡೆ ಕಣ್ಗಾವಲು ಹಾಕಿದ್ದೇವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News