ಪ್ರಣಾಳಿಕೆ ಬಿಡುಗಡೆ ಮಾಡಿದ ಆರ್‌ಜೆಡಿ, 10 ಲಕ್ಷ ಉದ್ಯೋಗ ಭರವಸೆ ಪುನರುಚ್ಚರಿಸಿದ ತೇಜಸ್ವಿ ಯಾದವ್

Update: 2020-10-24 06:18 GMT

  ಪಾಟ್ನಾ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ನಿರುದ್ಯೋಗವನ್ನು ಪ್ರಮುಖ ವಿಚಾರವನ್ನಾಗಿ ಪರಿಗಣಿಸಿರುವ ರಾಷ್ಟ್ರೀಯ ಜನತಾದಳದ ನಾಯಕ ತೇಜಸ್ವಿ ಯಾದವ್ ಶುಕ್ರವಾರ ಪಕ್ಷದ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. 10 ಲಕ್ಷ ಸರಕಾರಿ ನೌಕರಿ ಹಾಗೂ ಉತ್ತಮ ಆರೋಗ್ಯ ಮೂಲಭೂತ ಸೌಕರ್ಯ ಒದಗಿಸುವ ತನ್ನ ಭರವಸೆಯನ್ನು ಪುನರುಚ್ಚರಿಸಿದರು.

ಬಿಹಾರದ ಜನತೆಯನ್ನು ಮೂರ್ಖರನ್ನಾಗಿಸಲು ಪ್ರಯತ್ನಿಸುತ್ತಿರುವ ಬಿಜೆಪಿಯ ವಿರುದ್ಧ ತೇಜಸ್ವಿ ಯಾದವ್ ವಾಗ್ದಾಳಿ ನಡೆಸಿದರು.

10 ಲಕ್ಷ ಸರಕಾರಿ ನೌಕರಿ ನೀಡುವ ನಮ್ಮ ಭರವಸೆ ಅಪ್ಟಟವಾದುದು. ಬಿಜೆಪಿ ಸರಕಾರ ಮಾಡಿದಂತೆ ನಾವು 50 ಲಕ್ಷ ಉದ್ಯೋಗಗಳನ್ನು ನೀಡುತ್ತೇವೆಂದು ಭರವಸೆ ನೀಡಲು ಹೋಗಲಾರೆವು ಎಂದು 19 ಲಕ್ಷ ಉದ್ಯೋಗದ ಭರವಸೆ ನೀಡಿರುವ ಬಿಜೆಪಿಯ ಪ್ರಣಾಳಿಕೆಗೆ ಯಾದವ್ ಟಾಂಗ್ ನೀಡಿದರು.

ಬಿಹಾರದ ಬಜೆಟ್‌ನಲ್ಲಿ ತೇಜಸ್ವಿ ಯಾದವ್ 10 ಲಕ್ಷ ಸರಕಾರಿ ಉದ್ಯೋಗವನ್ನು ಹೇಗೆ ನೀಡುತ್ತಾರೆ ಎಂದು ಉ ಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಪ್ರಶ್ನಿಸಿರುವುದಕ್ಕೆ ಉತ್ತರಿಸಿದ ಯಾದವ್, ಬಿಹಾರ ಸರಕಾರಕ್ಕೆ 4 ಲಕ್ಷ ಉದ್ಯೋಗವನ್ನು ಸುಲಭವಾಗಿ ನೀಡಬಹುದು. ರಾಜ್ಯದಲ್ಲಿ 2.13 ಲಕ್ಷ ಕೋಟಿ ಬಜೆಟ್ ಹೊಂದಿದೆ. ಕೇವಲ ಶೇ.60ರಷ್ಟು ವ್ಯಯಿಸಲಾಗಿದೆ. ನಿತೀಶ್ ಕುಮಾರ್ ಸರಕಾರ ಇನ್ನುಳಿದ ಶೇ.40ರಷ್ಟು ಅಂದರೆ 80,000 ಕೋ.ರೂ. ಬಜೆಟ್ ಬಳಸಿಕೊಳ್ಳಲು ಅಸಮರ್ಥವಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News