ನೈಜೀರಿಯ: ಹಿಂಸಾಚಾರದಲ್ಲಿ 51 ಸಾವು; ಸರಕಾರ ವಿರೋಧಿ ಪ್ರತಿಭಟನೆಗಳ ಬಳಿಕ ಅಧ್ಯಕ್ಷರ ಹೇಳಿಕೆ

Update: 2020-10-24 16:10 GMT

 ಅಬುಜ (ನೈಜೀರಿಯ), ಅ. 24: ಪೊಲೀಸ್ ದೌರ್ಜನ್ಯವನ್ನು ಪ್ರತಿಭಟಿಸಿ ಹಲವು ದಿನಗಳ ಕಾಲ ನಡೆದ ಶಾಂತಿಯುತ ಪ್ರತಿಭಟನೆಗಳ ಬಳಿಕ ಸಂಭವಿಸಿದ ಹಿಂಸಾಚಾರದಲ್ಲಿ ದೇಶದಲ್ಲಿ 51 ಮಂದಿ ಮೃತಪಟ್ಟಿದ್ದಾರೆ ಎಂದು ನೈಜೀರಿಯ ಅಧ್ಯಕ್ಷ ಮುಹಮ್ಮದ್ ಬುಹಾರಿ ಪ್ರಕಟಿಸಿದ್ದಾರೆ. ಹಿಂಸಾಚಾರಕ್ಕೆ ಪ್ರತಿಭಟನಕಾರರ ‘ದುಂಡಾವರ್ತಿ ವರ್ತನೆ’ ಕಾರಣ ಎಂದು ಆರೋಪಿಸಿದ ಅವರು, ಭದ್ರತಾ ಪಡೆಗಳು ‘ಗರಿಷ್ಠ ಸಂಯಮ’ವನ್ನು ಕಾಯ್ದುಕೊಂಡಿವೆ ಎಂದು ಶುಕ್ರವಾರ ರಾತ್ರಿ ಬಿಡುಗಡೆ ಮಾಡಿದ ಹೇಳಿಕೆಯೊಂದರಲ್ಲಿ ಅವರು ಹೇಳಿಕೊಂಡಿದ್ದಾರೆ.

ಮಂಗಳವಾರ ರಾತ್ರಿ ರಾಜಧಾನಿ ಅಬುಜದಲ್ಲಿ ದೊಡ್ಡ ಸಂಖ್ಯೆಯ ಜನರು ರಾಷ್ಟ್ರಗೀತೆ ಹಾಡುತ್ತಿದ್ದಾಗ ಸೈನಿಕರು ಅವರ ಮೇಲೆ ಗುಂಡು ಹಾರಿಸಿ ಕನಿಷ್ಠ 12 ಪ್ರತಿಭಟನಕಾರರನ್ನು ಕೊಂದಿದ್ದಾರೆ ಎಂಬುದಾಗಿ ಆ್ಯಮ್ನೆಸ್ಟಿ ಇಂಟರ್‌ನ್ಯಾಶನಲ್ ವರದಿ ಮಾಡಿದೆ.

ಗುರುವಾರದ ವೇಳೆಗೆ, ‘ದಂಗೆಕೋರರು’ 11 ಪೊಲೀಸರು ಮತ್ತು ಏಳು ಸೈನಿಕರನ್ನು ಕೊಂದಿದ್ದಾರೆ ಹಾಗೂ ಈ ದುಂಡಾವರ್ತನೆ ಇನ್ನೂ ನಿಂತಿಲ್ಲ ಎಂಬುದಾಗಿಯೂ ಬುಹಾರಿ ಹೇಳಿದರು. 37 ನಾಗರಿಕರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸಮಸ್ಯೆಗೆ ಪರಿಹಾರವೊಂದನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ, ದೇಶದ ಮಾಜಿ ಸರಕಾರಿ ಮುಖ್ಯಸ್ಥರು ಮತ್ತು ಅಧಿಕಾರಿಗಳ ಜೊತೆ ನಡೆಸಿದ ಸಭೆಯಲ್ಲಿ ಅವರು ಈ ಹೇಳಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News