ಮತ್ತೊಂದು ಕ್ರೀಡೆಯಲ್ಲೂ ತನ್ನ ಪರಾಕ್ರಮ ಸಾಬೀತುಪಡಿಸಿದ ಸ್ಪೇನ್ ಟೆನಿಸ್ ಸ್ಟಾರ್ ನಡಾಲ್

Update: 2020-10-27 07:28 GMT

ಮ್ಯಾಡ್ರಿಡ್: ಮಲ್ಲೊರ್ಕಾದಲ್ಲಿ ನಡೆದ ಪ್ರೊ-ಆಮ್ ಗಾಲ್ಫ್ ಟೂರ್ನಮೆಂಟ್‌ನಲ್ಲಿ ಟೆನಿಸ್ ಸ್ಟಾರ್ ರಫೆಲ್ ನಡಾಲ್ ಆರನೇ ಸ್ಥಾನ ಪಡೆದರು. ಈ ಮೂಲಕ ತಾನು ಗಾಲ್ಫ್ ನಲ್ಲೂ ಸೈ ಎನಿಸಿಕೊಂಡಿದ್ದಾರೆ.

ಪ್ಯಾರಿಸ್‌ನಲ್ಲಿ ಎರಡು ವಾರಗಳ ಹಿಂದೆ 13ನೇ ಬಾರಿ ಫ್ರೆಂಚ್ ಓಪನ್ ಪ್ರಶಸ್ತಿ ಎತ್ತಿ ಹಿಡಿದಿದ್ದ ಸ್ಪೇನ್ ಆಟಗಾರ ನಡಾಲ್ ಸೋಮವಾರ ನಡೆದ ಬಾಲೆರಿಕ್ ಗಾಲ್ಫ್ ಪ್ರೊ ಆಮ್ ಚಾಂಪಿಯನ್‌ಶಿಪ್‌ನಲ್ಲಿ ಆರನೇ ಸ್ಥಾನ ಪಡೆಯುವುದರೊಂದಿಗೆ ಮತ್ತೊಂದು ಕ್ರೀಡಾರಂಗದಲ್ಲೂ ತನ್ನ ಪರಾಕ್ರಮವನ್ನು ಸಾಬೀತುಪಡಿಸಿದರು.

ಸೆಬಾಸ್ಟಿಯನ್ ಗಾರ್ಸಿಯಾ ಜಯಶಾಲಿಯಾಗಿರುವ ಪ್ರೊ ಆಮ್ ಸ್ಪರ್ಧೆಯ ಆರಂಭಿಕ ಎರಡು ಸುತ್ತಿನಲ್ಲಿ ನಡಾಲ್ 77 ಅಂಕ ಗಳಿಸಿದ್ದರು.

ವಿಶ್ವದ ನಂ.2ನೇ ಕ್ರಮಾಂಕದ ಟೆನಿಸ್ ತಾರೆ ಆಗಿರುವ ನಡಾಲ್ ಫ್ರೆಂಚ್ ಓಪನ್‌ನಲ್ಲಿ ಏಕಪಕ್ಷೀಯವಾಗಿ ನಡೆದಿದ್ದ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.1 ಆಟಗಾರ ನೊವಾಕ್‌ಜೊಕೊವಿಕ್‌ರನ್ನು ಮಣಿಸಿ 20ನೇ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದರು. ಇದರೊಂದಿಗೆ ರೋಜರ್ ಫೆಡರರ್ ಅವರ ಸಾರ್ವಕಾಲಿಕ ಶ್ರೇಷ್ಠ ಗ್ರಾನ್‌ಸ್ಲಾಮ್ ಪ್ರಶಸ್ತಿಗಳ ದಾಖಲೆ ಸರಿಗಟ್ಟಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News